ಮಣಿಪಾಲ: 29ವರ್ಷಗಳ ಹಳೆ ಪ್ರಕರಣದ ಆರೋಪಿಯ ಬಂಧನ


ಮಣಿಪಾಲ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 29 ವರ್ಷಗಳಿಂದ ತಲೆಮೆರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.


ಬಂಧಿತನನ್ನು ಕುಂದಾಪುರದ ಕೃಷ್ಣ ಭಂಡಾರಿ ಎಂದು ಗುರುತಿಸಲಾಗಿದೆ. 1995ರಲ್ಲಿ ಈತ ವ್ಯಕ್ತಿಯೊಬ್ಬರಿಗೆ ಅಡ್ಡಗಟ್ಟಿ, ಕಬ್ಬಿಣದ ಸರಳುಗಳಿಂದ ತೀವ್ರ ತರದ ರಕ್ತ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದ ಕೃಷ್ಣ ಭಂಡಾರಿ ತಲೆಮರಿಸಿಕೊಂಡಿದ್ದು, ಈತನನ್ನು ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ಮಾರ್ಗದರ್ಶನದಲ್ಲಿ ಸಿಬ್ಬಂದಿ ಪ್ರಸನ್ನ ಸಿ. ಹಾಗೂ ಇಮ್ರಾನ್ ಮಾಹಿತಿಯನ್ನು ಕಲೆಹಾಕಿ ಕುಂದಾಪುರದಿಂದ ವಶಕ್ಕೆ ಪಡೆದುಕೊಂಡಿ ದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ

Latest Indian news

Popular Stories