ಮಣಿಪಾಲ: ಸಿಟಿ ಬಸ್ ಢಿಕ್ಕಿ: ಪಾದಾಚಾರಿ ಸ್ಥಳದಲ್ಲಿಯೇ ಮೃತ್ಯು

ಮಣಿಪಾಲ: ಮಣಿಪಾಲದ ಈಶ್ವರ ನಗರ ಎಂಬಲ್ಲಿ ಸಂಜೆ ವೇಳೆ ಸಿಟಿ ಬಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಈಶ್ವರ ನಗರದ ನಿವಾಸಿ ಮಹಾಬಲ ಶೆಟ್ಟಿಗಾರ್(78) ಮೃತ ವ್ಯಕ್ತಿ. ಮಣಿಪಾಲದಿಂದ ಪರ್ಕಳ ಕಡೆ ಹೋಗುತ್ತಿದ್ದ ಬಸ್, ರಸ್ತೆ ದಾಟುತ್ತಿದ್ದ ಮಹಾಬಲ ಶೆಟ್ಟಿಗಾರ್ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest Indian news

Popular Stories