ಮಣಿಪಾಲ | ಚಕ್ರಕ್ಕೆ ಸಿಲುಕಿ ಬಸ್‌ ಮಾಲಕ ಮೃತ್ಯು

ಮಣಿಪಾಲ: 80 ಬಡಗಬೆಟ್ಟುವಿನ ಗ್ಯಾರೇಜ್‌ ಒಂದರಲ್ಲಿ ಬುಧವಾರ ಸಂಭವಿಸಿದ ಅವಘಡದಲ್ಲಿ ಬಸ್‌ ಮಾಲಕ ಮೃತಪಟ್ಟಿದ್ದಾರೆ.

ಖಾಸಗಿ ಬಸ್‌ನ ಮಾಲಕ ದಯಾನಂದ ಶೆಟ್ಟಿ (65) ಮೃತಪಟ್ಟವರು. ಇವರು ತಮ್ಮ ಬಸ್‌ ಅನ್ನು ಗ್ಯಾರೇಜ್‌ನಲ್ಲಿ ರಿಪೇರಿಗೆ ನೀಡಿದ್ದನ್ನು ನೋಡಲು ಬಂದಿದ್ದರು. ಈ ವೇಳೆ ಬಸ್‌ನ ಎದುರು ನಿಂತಿದ್ದ ವೇಳೆ ಚಾಲಕ ಬಸ್‌ ಚಲಾಯಿಸಿದ ಪರಿಣಾಮ ಅವರು ಮುಂಭಾಗದ ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದರು.

ತತ್‌ಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

Latest Indian news

Popular Stories