ಮಣಿಪಾಲ: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರ ಕಳ್ಳತನ!

ಉಡುಪಿ, ಆ.5: ಮಣಿಪಾಲ ಠಾಣಾ ವ್ಯಾಾಪ್ತಿಿಯ ಹಯಗ್ರಿಿವನಗರದಲ್ಲಿ ರಸ್ತೆೆಬದಿಯಲ್ಲಿ ನಡೆದುಕೊಂಡು ಹೋಗುತ್ತಿಿದ್ದ ಶಾಂತಾ ಕಾಮತ್(84) ಅವರ ಚೈನ್ ಅನ್ನು ಕಳ್ಳನೊಬ್ಬ ಕಳವುಗೈದು ಪರಾರಿಯಾಗಿದ್ದಾಾನೆ.


ಶಾಂತಾ ಕಾಮತ್ ಅವರು ಆ.5ರಂದು ಬೆಳಗ್ಗೆೆ 7 ಗಂಟೆಗೆ ಕೆಲಸಕ್ಕೆೆಂದು ಹೋಗುತ್ತಿಿದ್ದರು. ಸಗ್ರಿಿನೋಳೆ ಶಾಲೆ ರಸ್ತೆೆಯಲ್ಲಿ ನಡೆದುಕೊಂಡು ಹೋಗುತ್ತಿಿರುವಾಗ ಕುಂಡೇಲು ಎಂಬಲ್ಲಿ ತಲುಪುವಾಗ ಅವರ ಹಿಂದುಗಡೆಯಿಂದ ಬಂದ ವ್ಯಕ್ತಿಿ ಕುತ್ತಿಿಗೆಗೆ ಕೈಹಾಕಿ ಕುತ್ತಿಿಗೆಯಲ್ಲಿದ್ದ ಚಿನ್ನದ ಚೈನ್ ಅನ್ನು ಎಳೆದಿದ್ದಾಾನೆ. ಈ ವೇಳೆ ಅವರು ಆತನನ್ನು ಹಿಡಿಯಲು ಯತ್ನಿಿಸಿದರೂ ಆತ ಚೈನ್ ಸಹಿತ ಪರಾರಿಯಾಗಿದ್ದಾಾನೆ. ಈ ವೇಳೆ ಶಾಂತಾ ಕಾಮತ್ ಅವರ ಕೈಗೆ ಗಾಯವೂ ಆಗಿದೆ. 20 ಗ್ರಾಾಂನ ಚೈನ್ ಅದಾಗಿತ್ತು. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories