ಪೇಜಾವರ ಸ್ವಾಮಿ ವಿವಾದ: ರಾಜಕೀಯ ವಿಷಯಗಳಲ್ಲಿ ಮೂಗು ತೂರಿಸುವುದು ಹಾಗೂ ಕಾಂಗ್ರೆಸ್ ನಾಯಕರನ್ನು ಅನಗತ್ಯವಾಗಿ ಟೀಕಿಸುವುದು ಅವರು ಹೊಂದಿರುವ ಸ್ಥಾನಕ್ಕೆ ಘನತೆ ತರುವುದಿಲ್ಲ – ಕಾಂಗ್ರೇಸ್

ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಅವರು ಹೊಂದಿರುವ ಸ್ಥಾನದಿಂದಾಗಿ ಗೌರವಾರ್ಹರಾಗಿದ್ದಾರೆ.
ರಾಜಕೀಯ ವಿಷಯಗಳಲ್ಲಿ ಮೂಗು ತೂರಿಸುವುದು ಹಾಗೂ ಕಾಂಗ್ರೆಸ್ ನಾಯಕರನ್ನು ಅನಗತ್ಯವಾಗಿ ಟೀಕಿಸುವುದು ಅವರು ಹೊಂದಿರುವ ಸ್ಥಾನಕ್ಕೆ ಘನತೆ ತರುವುದಿಲ್ಲ ಎಂಬ ಮಾತನ್ನು ಅವರ ಸ್ಥಾನದ ಮೇಲಿನ ಗೌರವದಿಂದಲೇ ಹೇಳಲು ಬಯಸುತ್ತೇವೆ ಎಂದು ಕರ್ನಾಟಕ ಕಾಂಗ್ರೇಸ್ ಹೇಳಿದೆ

ಹಿಂದೂ ಧರ್ಮದ ಗುತ್ತಿಗೆಯನ್ನು ಬಿಜೆಪಿಗಾಗಲಿ, ಆರ್ಎಸ್ಎಸ್ ಗಾಗಲಿ ನೀಡಿಲ್ಲ, ಬಿಜೆಪಿ ಅಂದರೆ ಇಡೀ ಹಿಂದೂ ಸಮಾಜವಲ್ಲ, ಹಾಗೆಯೇ ಪೇಜಾವರ ಸ್ವಾಮಿಗಳೂ ಸಹ ಇಡೀ ಹಿಂದೂ ಸಮಾಜದ ಪ್ರತಿನಿಧಿಯಲ್ಲ.

ಸ್ವಾಮಿಗಳು ರಾಜಕೀಯದಲ್ಲಿ ಆಸಕ್ತಿ ತೋರುವುದಕ್ಕಿಂತ ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸುವಲ್ಲಿ ಆಸಕ್ತಿ ತೋರಿದರೆ ಒಳಿತು.
ಹಾಗೆಯೇ ತಮ್ಮ ಕ್ಷೇತ್ರವಲ್ಲದ ರಾಜಕೀಯದ ಬಗ್ಗೆ ಮಾತನಾಡುವಾಗ ಸತ್ಯಾಸತ್ಯತೆಯನ್ನು ಅರಿಯುವುದೊಳಿತು ಕರ್ನಾಟಕ ಕಾಂಗ್ರೇಸ್ ಪ್ರಕಟಣೆ ಹೊರಡಿಸಿದೆ‌

Latest Indian news

Popular Stories