ಉಡುಪಿ: ನೇಜಾರಿನಲ್ಲಿ 2023 ರ ನವೆಂಬರ್ ನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆಯನ್ನು ಬಿಗಿ ಭದ್ರತೆಯಲ್ಲಿ ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಇಂದು ಪ್ರಕರಣದ ಸಾಕ್ಷಿ ವಿಚಾರಣೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು. ಸಾಕ್ಷಿಗಳು ಹಾಜರಿದ್ದರು. ಆದರೆ ಆರೋಪಿ ಪರ ವಕೀಲರನ್ನು ಬದಲಾಯಿಸುವ ಕುರಿತು ನ್ಯಾಯಾಲಯದ ಮುಂದೆ ಮನವಿ ಮಂಡಿಸಿದ ಕಾರಣ ಮುಂದಿನ ವಿಚಾರಣಾ ದಿನಾಂಕವನ್ನು ನವೆಂಬರ್ 21 ಕ್ಕೆ ಮುಂದೂಡಲಾಯಿತು.
ಕಳೆದ ನವೆಂಬರ್ 12 ರಂದು ಉಡುಪಿ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣ ನಡೆದು 2024 ರ ನವೆಂಬರ್ 12 ಕ್ಕೆ ಒಂದು ವರ್ಷ ಪೂರ್ಣಗೊಂಡಿದ್ದು ಇದೀಗ ನ್ಯಾಯಾಲಯ ಸಾಕ್ಷಿ ವಿಚಾರಣೆಗಾಗಿ ಪ್ರಮುಖ ಸಾಕ್ಷಿಗಳಿಗೆ ಸಮನ್ಸ್ ನೀಡಿದೆ.