“ನಮ್ಮ ಜೆಪಿ, ನಮ್ಮ ಎಮ್.ಪಿ” – ಜಯ ಪ್ರಕಾಶ್ ಹೆಗ್ಡೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಟಿದ್ದು ಎರಡು ಹೊಸ ಮುಖಗಳು ಮುಖಾಮುಖಿಯಾಗುವುದು ಸ್ಪಷ್ಟವಾಗಿದೆ. ಬಿಜೆಪಿಯಿಂದ ಕೋಟ ಶ್ರೀನಿವಾಸ್ ಪೂಜಾರಿ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದರೆ ಇತ್ತ ಇತ್ತೀಚೆಗೆ ಮರಳಿ ಕಾಂಗ್ರೆಸ್ ಸೇರಿದ ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿಯಾಗುವುದು ಬಹುತೇಕ ಖಚಿತಗೊಂಡಿದೆ.

ಕರಾವಳಿಯಲ್ಲಿ ಹಿರಿಯ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಒಂದು ದೊಡ್ಡ ಅಭಿಮಾನಿ ಬಳಗ ಹೊಂದಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ “ನಮ್ಮ ಜೆ.ಪಿ, ನಮ್ಮ ಎಮ್.ಪಿ” ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.

ಈಗಾಗಲೇ ವಾಟ್ಸಪ್ ಗ್ರೂಪ್, ಫೆಸ್ಬುಕ್, ಇನ್ನಿತರ ಜಾಲತಾಣಗಳಲ್ಲಿ ಸಕ್ರಿಯಗೊಂಡಿರುವ ಜೆ.ಪಿ ಅಭಿಮಾನಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. 2012 ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಜಯ ಸಾಧಿಸಿದ್ದರು‌. ಇದೀಗ ಮತ್ತೊಮ್ಮೆ ಗೆಲ್ಲಿಸುವ ಯತ್ನದಲ್ಲಿ ಅಭಿಮಾನಿಗಳು ಅಭ್ಯರ್ಥಿ ಘೋಷಣೆ ಮುಂಚೆಯೇ ತೊಡಗಿಸಿಕೊಂಡಿದ್ದು ಗೆಲುವಿನ ಲೆಕ್ಕಚಾರದಲ್ಲಿದ್ದಾರೆ.

Latest Indian news

Popular Stories