ಪಡುಬಿದ್ರಿ: ಬ್ಯಾಂಕ್ ಮೆನೇಜರ್’ಗೆ ಚಳ್ಳೆಹಣ್ಣು ತಿನ್ನಿಸಿದ ಖದೀಮರು – ವರ್ಗಾಯಿಸಿಕೊಂಡಿದ್ದು ಬರೊಬ್ಬರೀ 28 ಲಕ್ಷ!

ಪಡುಬಿದ್ರಿ: ಆನ್ಲೈನ್ ಮೋಸದ ಹವಳಿ ಉಡುಪಿಯಲ್ಲಿ ವಿಪರೀತ ಹೆಚ್ಚಾಗುತ್ತಿದ್ದು ನಾನಾ ರೀತಿಯಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಇದೀಗ ಸ್ವತಃ ಬ್ಯಾಂಕ್ ಮ್ಯಾನೇಜರ್’ಗೆ ಖದೀಮರು ಚಳ್ಳೆಹಣ್ಣು ತಿನ್ನಿಸಿದ್ದಾರೆ.

ವೈಷ್ಣವಿ (27) ಎಂಬುವವರು ಪಡುಬಿದ್ರಿ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಇನ್‌ ಚಾರ್ಜ ಮೆನೇಜರ್‌  ಆಗಿ ಕೆಲಸ ಮಾಡಿಕೊಂಡಿದ್ದು ಫೆ 17 ರಂದು ಬ್ಯಾಂಕಿನಲ್ಲಿರುವಾಗ ಮೊಬೈಲ್‌ ಗೆ ವರುಣ್‌ ಕರ್ಕೆರ ಎಂಬವರು  ಮೊಬೈಲ್‌ ಪೋನ್‌ ನಿಂದ  ಕರೆ ಬಂದಿದೆ. ತಾನು ಆಸ್ಪತ್ರೆಯಲ್ಲಿದ್ದು ತನಗೆ  ಹಣದ ಅವಶ್ಯಕತೆ ಇದ್ದು ಚೆಕ್‌‌ಬುಕ್ ನೀಡುವಂತೆ ಕೇಳಿದ್ದಾರೆ.

ನಂತರ ಪುನಃ ಕರೆ ಮಾಡಿ ರಿಕ್ವೆಸ್ಟ್‌ ಲೆಟರ್‌ ಇ ಮೈಲ್‌ ಮುಖಾಂತರ ಕಳುಹಿಸಲು ಅಸಾದ್ಯವಾಗಿದ್ದು, ವಾಟ್ಸ್‌ ಅಪ್‌ ಮೂಲಕ ರಿಕ್ವೆಸ್ಟ್‌ ಲೆಟರ್‌ ಕಳುಹಿಸುವುದಾಗಿ ತಿಳಿಸಿ ವಾಟ್ಸ್‌ ಆಪ್ ಗೆ ರಿಕ್ವೆಸ್ಟ್ ಲೆಟರ್ ಕಳುಹಿಸಿದ್ದಾರೆ. ಅದು ಜಿ ಕೆ ಪವರ್‌ ಘಾಟ್ಕೆ ಕರ್ಕೆರ ಪವರ್‌ ಇಂಡಸ್ಟ್ರಿಸ್‌  ಹೆಸರಿನ ಲೆಟರ್‌ ಹೆಡ್‌ ಆಗಿದ್ದು, ಅದರಲ್ಲಿ ಸೀಲ್‌ ಹಾಗೂ ಸಹಿ ಇದ್ದು, ಅಕೌಂಟ್‌ ನಂಬರ್ ಕೂಡ ನಮೂದಿಸಿದ್ದಾರೆ. ಅಜಯ್‌ ಇರ್ಪಾಚೆ ಅಕೌಂಟ್‌ ಗೆ 9,70,855/- ರೂ, ಗುಡ್ಡು ಪಾಂಡೆ ಅಕೌಂಟ್‌ ಗೆ 8,92,740/-ರೂ, ಹರಪಾಲ್‌ ಗೆ 9,35,853/- ರೂ ಅನ್ನು ಟ್ರಾನ್ಸಪರ್‌ ಮಾಡುವಂತೆ ಸೂಚಿಸಿದಂತೆ ಮ್ಯಾನೇಜರ್ ವೈಷ್ಣವಿಯವರು ಅಜಯ್‌ ಇರ್ಪಾಚೆ ಮತ್ತು ಗುಡ್ಡು ಪಾಂಡೆ ಇವರ ಅಕೌಂಟಿಗೆ RTGS ಮುಖಾಂತರ ಹರಪಾಲ್‌ ಅಕೌಂಟ್‌ ಗೆ ನಾರ್ಮಲ್‌ ರೀತಿಯಲ್ಲಿ ಒಟ್ಟು 27,99,448/- ಹಣವನ್ನು  ವರ್ಗಾವಣೆ ಮಾಡಿದ್ದಾರೆ.

ನಂತರ ಆಶಾಲತಾ ಎಂಬವರು ಕರೆಮಾಡಿ ಅವರ ಫರ್ಮ್‌ ಅಕೌಂಟ್‌ ನಿಂದ ಹಣ ವರ್ಗಾವಣೆಗೊಂಡ ಬಗ್ಗೆ ಕೇಳಿದ್ದು,  ಆಗ ರಿಕ್ಷೆಸ್ಟ್  ಲೆಟರ್ ಬಗ್ಗೆ ತಿಳಿಸಿದಾಗ ಮೋಸಮಾಡಿ ರಿಕ್ವೆಸ್ಟ್‌ ಲೆಟರ್‌ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಕೂಡಲೇ ಬ್ಯಾಂಕಿನ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ 1930 ಗೆ ಕರೆ ಮಾಡಿ ದೂರು ದಾಖಲಿಸಿದ್ದು, ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2024, ಕಲಂ: 420 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories