ಪಡುಬಿದ್ರಿ: ಮುದರಂಗಡಿಯಲ್ಲಿರುವಾಗ ಎಲ್ಲೂರು ಗ್ರಾಮದ ಇರಂದಾಡಿ ಗುಡ್ಡೆ ಕಾಡು ಇರುವ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ತಲೆಬುರುಡೆ, ಶರೀರರದ ಭಾಗಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಎಲ್ಲೂರು ಗ್ರಾಮದ ಇರಂದಾಡಿ ಗುಡ್ಡೆ ಕಾಡು ಇರುವ ಪ್ರದೇಶದಲ್ಲಿ ಅಪರಿಚಿತ ಗಂಡಸಿನ ಶವದ ತಲೆಬುರುಡೆ ಹಾಗೂ ಸೊಂಟದ ಭಾಗಗಳು ಪತ್ತೆಯಾಗಿದೆ. ಸಂಜೆ 6 ಗಂಟೆ ಸುಮಾರಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ಒಂದು ತಲೆಬುರುಡೆ ಸೊಂಟದ ಭಾಗ ಇರುವ ಶರೀರಕ್ಕೆ ಕಪ್ಪು ಪ್ಯಾಂಟ್ ಮತ್ತು ಎದೆಯ ಭಾಗದಲ್ಲಿ ಟೀ-ಶರ್ಟ್ ಧರಿಸಿದ ರೀತಿಯಲ್ಲಿದ್ದು ಯಾವುದೋ ಪ್ರಾಣಿಗಳು ದೇಹವನ್ನು ಎಳೆದಾಡಿದ ಸ್ಥಿತಿಯಲ್ಲಿದ್ದು ಕಂಡುಬಂದಿದ್ದು ಮೃತದೇಹದ ಕೆಳಬಾಗ ಕೊಳೆತಿರುತ್ತದೆ, ಯಾವದೋ ಅಪರಿಚಿತ ಗಂಡಸಿನ ಶವದಂತೆ ಕಾಣುಸುತ್ತಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 25/2024, ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.