ಉಡುಪಿ | ಪೋಕ್ಸೋ ಆರೋಪಿ ಶ್ರೇಯಾ ನಾಯ್ಕ್ ಬಂಧನ; ಜೂ.21ರ ತನಕ ನ್ಯಾಯಾಂಗ ಬಂಧನ

ಸಿದ್ದಾಪುರ: ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣದ ಆರೋಪಿ ಶಂಕರನಾರಾಯಣ ಗ್ರಾಮದ ಶ್ರೇಯಾ ನಾಯ್ಕನನ್ನು ಪೊಲೀಸರು ಶುಕ್ರವಾರ ಸಿದ್ದಾಪುರದಲ್ಲಿ ಬಂದಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಜೂ.21ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿ ಶ್ರೇಯಾ ನಾಯ್ಕ ವಿರುದ್ಧ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಮೇ 18ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು.ಅಂದಿನಿಂದ ಆರೋಪಿಯು ತಲೆ ಮರೆಸಿಕೊಂಡಿದ್ದು, ಪೊಲೀಸರು ತಂಡ ರಚಿಸಿಕೊಂಡು ಆರೋಪಿಗಾಗಿ ಬಲೆ ಬಿಸಿದರು.

ಶಿವಮೊಗ್ಗದಿಂದ ಬಸ್‌ನಲ್ಲಿ ಬರುತ್ತಿರುವ ಖಚಿತ ಮಾಹಿತಿಯ ಮೇರೆಗೆ ಸಿದ್ದಾಪುರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಕ್ಕೆ ಹಾಜರು ಪಡಿಸಿದರು.

Latest Indian news

Popular Stories