ಉಡುಪಿಯಲ್ಲಿ ಕೇಂದ್ರ ಸಚಿವೆ ಸಂಸದೆ ಶೋಭಾ ಕರಂದ್ಲಾಜೆ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತ್ ರೈಸನ್ನು ಉಡುಪಿಯಲ್ಲಿ ಬಿಡುಗಡೆ ಮಾಡಿದ್ದೇವೆ. ಕಡಿಮೆ ದರದಲ್ಲಿ ಗ್ರಾಹಕರಿಗೆ ಅಕ್ಕಿ ವಿತರಿಸುವ ಯೋಜನೆ ಇದಾಗಿದೆ. ಮಾರುಕಟ್ಟೆಯಲ್ಲಿ 45- 50 ರೂಪಾಯಿಗಿಂತ ಕಡಿಮೆ ಅಕ್ಕಿ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ದೇಶಾದ್ಯಂತ ಜನ ಸ್ಪಂದಿಸಿ ದೊಡ್ಡ ಪ್ರಮಾಣದಲ್ಲಿ ಅಕ್ಕಿ ತೆಗೆದುಕೊಂಡು ಹೋಗುತ್ತಿದ್ದಾರೆ. ಅಕ್ಕಿ ಪೂರೈಕೆ ಮಾಡಲು ಕಷ್ಟವಾಗುವಷ್ಟು ಡಿಮಾಂಡ್ ಇದೆ ಎಂದರು.
ಬರಗಾಲ ಬಂದಿದೆ ಈ ಬಾರಿ ಬೆಳೆ ಕಡಿಮೆ ಇರಬಹುದು.ಮುಂದಿನ ದಿನದಲ್ಲಿ ಯೋಜನೆ ಇನ್ನಷ್ಟು ವಿಸ್ತರಣೆ ಮಾಡುವ ಆಲೋಚನೆ ಇದೆ. ನಮ್ಮ ವಿಧಾನಸೌಧಕ್ಕೆ ರಕ್ಷಣೆ ಇದೆ ರಕ್ಷಣೆಯ ನಡುವೆ ಒಂದು ಸಾವಿರ ಜನ ಪಾಸ್ ಇಲ್ಲದೆ ಹೇಗೆ ವಿಧಾನಸೌಧದ ಒಳಗೆ ಬಂದರು.
ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮಾನಸಿಕತೆ ಇದ್ದವರನ್ನು ಪೊಲೀಸರು ಹೇಗೆ ಒಳಗೆ ಬಿಟ್ಟರು.ನಜೀರ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು.ನಜೀರ್ ಬೆಂಬಲಿಗರು, ನಜೀರ್ ಸಂಪರ್ಕ ಯಾರ ಜೊತೆ ಇದೆ. ಅಲ್ಲಿ ಬಂದಿರುವ ಯುವಕರ ಸಂಪರ್ಕ ಯಾರ ಜೊತೆ ಇದೆ. ಇಂದು ನಾನು ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಇದರ ಹಿಂದೆ ಬಹಳ ದೊಡ್ಡ ಷಡ್ಯಂತ್ರದ ಗುಮಾನಿ ಇದೆ ಎಂದು ಹೇಳಿದರು.
ಭಾರತವನ್ನು ವಿಭಜನೆ ಮಾಡುವ ಮಾತನ್ನು ಕಾಂಗ್ರೆಸ್ ಆಡುತ್ತಿದೆ. ದೇಶದಲ್ಲಿ ಗೊಂದಲ ನಿರ್ಮಾಣ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಓಲೈಕೆ ಮಾಡುವ ಉದ್ದೇಶದಿಂದ ಕಚೇರಿ ಮನೆಯೊಳಗೆ ಸಿದ್ದರಾಮಯ್ಯ ಯಾರನ್ನು ಬೇಕಾದರೂ ಬಿಟ್ಟುಕೊಳ್ಳುತ್ತಿದ್ದಾರೆ. ಪ್ರಕರಣವನ್ನು ಎನ್ ಐಎ ತನಿಖೆ ಮಾಡಿದರೆ ಸತ್ಯಾಸತ್ಯತೆ ಹೊರಬರುತ್ತದೆ.ಇದರ ಹಿಂದಿರುವ ಶಕ್ತಿಯನ್ನು ಪೊಲೀಸರು ಪತ್ತೆ ಮಾಡಬೇಕು. ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆರೋಪಿಯನ್ನ ಬಂಧಿಸುವಂತೆ ಕೇಳಿಕೊಂಡಿದ್ದೇನೆ ಎಂದರು.
ಯಾವುದೇ ಸರ್ಕಾರಗಳು ಅಧಿಕಾರ ಪರ್ಮನೆಂಟ್ ಅಲ್ಲ.ಘೋಷಣೆ ಕೂಗಿದ್ದ ಆರೋಪಿಗಳ ಬಂಧನವಾಗಿಲ್ಲ ನಜೀರ್ ಅವರ ವಿಚಾರಣೆ ನಡೆದಿಲ್ಲ ಎಂದರು.
ಉಡುಪಿ ಚುನಾವಣಾ ತಯಾರಿಗಳು ಚೆನ್ನಾಗಿ ನಡೆಯುತ್ತಿವೆ.ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ , ಅಂಚೆ ಇಲಾಖೆ, ರೈಲ್ವೆ ಇಲಾಖೆ ಎಲ್ಲಿ ಉತ್ತಮ ಕಾರ್ಯಕ್ರಮ ನೀಡಿದ್ದೇವೆ. ಶೇಕಡ 80 ರಿಂದ 90 ರಷ್ಟು ಜನಕ್ಕೆ ಕೇಂದ್ರ ಸರಕಾರದ ಯೋಜನೆಗಳು ತಲುಪಿವೆ ಎಂದರು.
ಆದರೆ ಪ್ರಚಾರದಲ್ಲಿ ಹಿಂದೆ ಬಿದ್ದಿದ್ದೇನೆ. ಎಲ್ಲಾ ಕಡೆಗೂ ಮೋದಿ ಕ್ಯಾಂಡಿಡೇಟ್ ಎಂದು ರಾಷ್ಟ್ರೀಯ ಅಧಿವೇಶನದಲ್ಲಿ ಪ್ರಧಾನಿ ಹೇಳಿದ್ದಾರೆ. ಎಲ್ಲಾ ಕಡೆಗೂ ಕಮಲ ಕ್ಯಾಂಡಿಡೇಟ್ ಯಾರು ಅಭ್ಯರ್ಥಿ ಅನ್ನೋದು ಮುಖ್ಯವಲ್ಲ. ಅಭ್ಯರ್ಥಿ ಯಾರು ಅನ್ನೋದು ನನಗೂ ಗೊತ್ತಿಲ್ಲ. ಭಿನ್ನಮತ ಶಮನವಾಗುತ್ತೆ ಎಂದು ಹೇಳಿದರು.
ಯಾಕೆಂದರೆ ಇದೆಲ್ಲವೂ ಪೂರ್ವ ನಿಯೋಜಿತ ಭಿನ್ನಮತ. ಹಣ ಇದ್ದವರು ಹಣ ಕೊಟ್ಟು ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದ್ದಾರೆ. ಹಣದ ದರ್ಪದಿಂದ ಚುನಾವಣೆ ಮಾಡಲು ಆಗಲ್ಲ. ಹಣ ಇದ್ದವರೇ ಈ ದೇಶದಲ್ಲಿ ಪ್ರಧಾನಿ ಆಗಬೇಕು, ಸಂಸದರಾಗಬೇಕು ಮುಖ್ಯಮಂತ್ರಿ ಆಗಬೇಕು ಅಂತಿದ್ರೆ ಟಾಟಾ ಬಿರ್ಲಾ, ಅದಾನಿ , ಅಂಬಾನಿ ಅಂತವರೇ ಆಗುತ್ತಿದ್ದರು ಎಂದರು.
ಆದರೆ ಒಬ್ಬ ಚಾಯ್ ಮಾರುವವರು ದೇಶದ ಪ್ರಧಾನಿಯಾಗಿದ್ದಾರೆ. ನನ್ನಂಥ ಸಾಮಾನ್ಯ ಕುಟುಂಬದಿಂದ ಬಂದವರು ದುಡ್ಡು ಇಲ್ಲದವರು ಸಂಸದರಾಗಿದ್ದಾರೆ.ಗುತ್ತಿಗೆದಾರರ ಜೊತೆ ಮಾತನಾಡದೆ ಇದ್ದವರು ಕೂಡ ಸಂಸದ ರಾಗಬಹುದು ಎಂದರೆ ಇದು ಪ್ರಜಾತಂತ್ರ ವ್ಯವಸ್ಥೆಯ ದೊಡ್ಡತನ. ಕಾರ್ಯಕರ್ತರು, ಜನರು ಭಾರತೀಯ ಜನತಾ ಪಕ್ಷದ ಕೈ ಹಿಡಿಯುತ್ತಾರೆ ಎಂದರು.
ಚಿಕ್ಕಮಗಳೂರಿನಲ್ಲಿ ಪತ್ರ ಅಭಿಯಾನ ವಿಚಾರವಾಗಿ ಪ್ರತಿಕ್ರಿಯಿಸಿ ಒಂದೇ ಕೈ ಬರಹದಲ್ಲಿ ಸುಮಾರು 41 ಪತ್ರಗಳನ್ನು ಹಾಕಿದ್ದಾರೆ. ಕೇವಲ ನಾಲ್ಕೇ ಜನ ಅದನ್ನು ಪೋಸ್ಟ್ ಮಾಡಿದ್ದಾರೆ.ಪ್ರತಿಯೊಬ್ಬರು 10-15 ಪತ್ರ ಹಿಡಿದು ಪೋಸ್ಟ್ ಮಾಡಿದ್ದಾರೆ.ಅವರಿಂದ ಪೋಸ್ಟ್ ಮಾಡಿಸಿದ್ದಾರ ಎಂದು ಉಡುಪಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.