ಉಡುಪಿ, ಸೆ.11; ಗಂಭೀರ ಸ್ಥಿತಿಯಲ್ಲಿದ್ದ ವೃದ್ಧರ ರಕ್ಷಣಾಕಾರ್ಯಚರಣೆಯು ಬಾರ್ಕೂರಿನಲ್ಲಿ ನಡೆದಿದೆ. ವೃದ್ಧರನ್ನು ನರಸಿಂಹ ದೇವಾಡಿಗ (71ವ) ಬಾರ್ಕೂರಿನ ಹೊಸಾಳದ ನಿವಾಸಿಯೆಂದು ರಕ್ಷಿಸಲ್ಪಟ್ಟ ವ್ಯಕ್ತಿಯ ಬಳಿಯಿದ್ದ ಆಧಾರ್ ಚೀಟಿಯ ಆಧಾರದಲ್ಲಿ ಗುರುತಿಸಲಾಗಿದೆ. ವೃದ್ಧರ ಸಂಬಂಧಿಕರು ಅಜ್ಜರಕಾಡಿನ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು, ರಕ್ಷಣಾ ಕಾರ್ಯಾಚರಣೆ ನಡೆಸಿರುವ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಸೂಚಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಾಗರಿಕರೊಬ್ಬರು,ಚಿಕಿತ್ಸೆ ಪಡೆಯಲು ಅಸಹಾಯಕರಾಗಿ ಮನೆಯಲ್ಲಿಯೇ ಮನೆಯಲ್ಲಿ ಒಬ್ಬಂಟಿಯಾಗಿ ಅಯ್ಯೋಮಯ ಸ್ಥಿತಿಯಲ್ಲಿ ಬದುಕಿನ ಸಂದ್ಯಾಕಾಲವನ್ನು ಕಳೆಯುತ್ತಿದ್ದರು. ಹೀಗಿರುವಾಗ ವೃದ್ಧರು ಬುಧವಾರ ಬೆಳಗಿನ ಜಾವ ಮೂತ್ರಬಾಧೆ ತಿರಿಸಲು ಶೌಚಾಲಯಕ್ಕೆ ತೆರಳಿದಾಗ ಎಡವಿಬಿದ್ದು ಎದ್ದೇಳಲಾಗದೆ ಬೊಬ್ಬಿಡತ್ತ ನೆರವುಯಾಚಿಸುತ್ತಿದ್ದರು. ರಸ್ತೆಯಲ್ಲಿ ಹಾದುಹೋಗುತ್ತಿದ್ದವರು ಬೊಬ್ಬೆಕೇಳಿ ಸ್ಥಳದತ್ತ ಹೋದಾಗ ವೃದ್ಧರ ಗಂಭೀರ ಸ್ಥಿತಿ ಕಂಡುಬಂದಿದೆ. ತಕ್ಷಣ ಅವರು ಉಡುಪಿಯ ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿ, ವೃದ್ಧರ ರಕ್ಷಿಸುವಂತೆ ವಿನಂತಿಸಿಕೊಂಡಿದ್ದರು. ಉಡುಪಿಯಲ್ಲಿದ್ದ ಒಳಕಾಡುವರು ಅಂಬುಲೇನ್ಸ್ ಮೂಲಕ ಬಾರ್ಕೂರಿನ ಹೊಸಾಳಕ್ಕೆ ತೆರಳಿ ವೃದ್ಧರನ್ನು ರಕ್ಷಿಸಿ, ಕರೆತಂದು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ.