ಅನಂತ್ ಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಭಟನೆ | ಬಿಜೆಪಿಗೆ ಕೊಡುವ ಒಂದೊಂದು ವೋಟು ಆರ್.ಎಸ್.ಎಸ್’ನ್ನು ಬಲಪಡಿಸುತ್ತದೆ | ಆರ್.ಎಸ್.ಎಸ್ ಘಟ ಸರ್ಪ – ಪ್ರೊ.ಫಣಿರಾಜ್

ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಉಡುಪಿ ಜಿಲ್ಲೆ ವತಿಯಿಂದ ಸಂಸದ ಅನಂತ್ ಕುಮಾರ್ ಹೆಗಡೆಯ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರೊ.ಫಣಿರಾಜ್, “ಅನಂತ್ ಕುಮಾರ್ ಹೆಗಡೆ ಮಿನಿ ನಾಗರ RSS ಘಟ ಸರ್ಪವಾಗಿದೆ. ಅನಂತ್ ಕುಮಾರ್ ಹೇಳಿಕೆ ಆರ್.ಎಸ್.ಎಸ್ ಹರಡಿದ ವಿಷ. ಅದನ್ನು ಇವರು ನಾಚಿಕೆಯಿಲ್ಲದೆ ಹರಡುತ್ತಿದ್ದಾರೆ. 400 ಸೀಟು ಕೊಡಿ ಸಂವಿಧಾನ ಬದಲಾಯಿಸುತ್ತೇವೆ ಎಂದು ನಾಚಿಕೆಯಿಲ್ಲದೆ ಹೇಳುತ್ತಿದ್ದಾರೆ‌. ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ, ಬಿಜೆಪಿಗೆ ಕೊಡುವ ಒಂದೊಂದು ಓಟು ಆರ್.ಎಸ್.ಎಸ್ ನ್ನು ಬಲಪಡಿಸುತ್ತದೆ ಎಂದು ಹೇಳಿದರು.

ಸಿಟಿ ರವಿ ಭಾರತವನ್ನು ಗಣರಾಜ್ಯ ಎನ್ನುವವರು ದೇಶದ್ರೋಹಿಗಳೆಂದು ಹೇಳಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾನೆ ಮೊದಲು ಸಿಟಿ ರವಿಗೆ ಧಿಕ್ಕಾರ ಹೇಳಬೇಕು. ಅಂಬೇಡ್ಕರ್ ಪ್ರತಿಮೆ ಮುನ್ನವೇ “ಮನು ಪ್ರತಿಮೆ” ಸ್ಥಾಪಿಸಿ ಅವರು ಅವಮಾನ ಮಾಡಿದ್ದಾರೆ. ಬಿಜೆಪಿಗೆ ಹಾಕುವ ಒಂದೊಂದು ವೋಟು ಮಿನಿ ಸರ್ಪಗಳು ಬೀದಿಯಲ್ಲಿ ಹರಿದಾಡುವಂತೆ ಮಾಡುತ್ತದೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇದ್ರೀಸ್ ಹೂಡೆ , “ದೇಶದ್ರೋಹಿ ಹೇಳಿಕೆ ವಿರೋಧಿಸಿ ನಾವು ಪ್ರತಿಭಟಿಸುತ್ತಿದ್ದೇವೆ. ದೇಶದ ಉನ್ನತಿ, ಏಕತೆ ಸಾಧ್ಯವಾಗಿದ್ದು ಸಂವಿಧಾನದಿಂದ ಮಾತ್ರವಾಗಿದೆ. ದೇಶದ ಪ್ರಗತಿಗೆ ಮೂಲ ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವಾಗಿದೆ. ಅದರ ಕಿಂಚಿತ್ತೂ ಜ್ಞಾನ ಇಲ್ಲದ ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಇಂದು ಬದಲಾಯಿಸಬೇಕಾಗಿರುವುದು ಅವರ ಮನುವಾದಿ ಮಾನಸೀಕತೆಯಾಗಿದೆ ಎಂದು ಹೇಳಿದರು.

ಈ ಹಿಂದೆಯೂ ಈ ರೀತಿಯ ಹೇಳಿಕೆ ನೀಡಿದ್ದರು. ಈಗಲೂ ಆ ಚಾಳಿ ಮುಂದುವರಿಸಿದ್ದಾರೆ. ಸಾಮಾಜಿಕ ನ್ಯಾಯ ಹಾಳು ಮಾಡಲು ಮೇಲ್ವರ್ಗಕ್ಕೆ 10% ಮೀಸಲಾತಿ ತರಲಾಯಿತು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಿಎಎ ಕಾನೂನು ತರಲಾಗಿದೆ. ಅನಂತ್ ಕುಮಾರ್ ಹೆಗಡೆ ಬಿಜೆಪಿಯ ಅಜೆಂಡಾದ ದನಿ ಅಷ್ಟೇ. ಪ್ರಜಾಪ್ರಭುತ್ವದಲ್ಲಿ ವಿಚಾರಧಾರೆಗಳ ಅಧಿಕಾರವಲ್ಲ, ಜನರ ಅಧಿಕಾರ ಮುಖ್ಯವಾಗಿದೆ. ಎಲ್ಲರ ಆಶಯ ಪ್ರತಿನಿಧಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸುಂದರ್ ಮಾಸ್ತರ್, ಮಂಜುನಾಥ್ ಗಿಳಿಯಾರ್,ಸಂವರ್ತ್ ಸಾಹಿಲ್, ಬಾಲಕೃಷ್ಣ ಶೆಟ್ಟಿ, ವೆರೋನಿಕಾ ಕರ್ನೆಲಿಯೋ ಸೇರಿದಂತೆ ಹಲವು ಮಂದಿ ಮಾತನಾಡಿದರು.

ಪ್ರತಿಭಟನೆಯ ಕೊನೆಯಲ್ಲಿ ಅನಂತ್ ಕುಮಾರ್ ಹೆಗಡೆ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿ ಬೆಂಕಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಡುಪಿ ಕ್ಯಾಥಲಿಕ್ ಸಭಾ ಮಾಜಿ ಅಧ್ಯಕ್ಷೆ ಮೇರಿ, ಮುಸ್ಲಿಂ ಒಕ್ಕೂಟದ ತಾಲೂಕು ಅಧ್ಯಕ್ಷ ಇರ್ಷಾದ್ ನೇಜಾರ್,ವೆರೋನಿಕಾ ಕರ್ನೆಲಿಯೋ, ಶ್ಯಾಮರಾಜ್ ಬಿರ್ತಿ, ಸುಂದರ್ ಮಾಸ್ತರ್, ಬಾಲಕೃಷ್ಣ ಶೆಟ್ಟಿ, ಕವಿರಾಜ್, ಸಾಲಿಡಾರಿಟಿ ಯೂತ್ ಮೂವ್ಮೆಂಟ್’ನ ನಬೀಲ್ ಗುಜ್ಜರ್ ಬೆಟ್ಟು, ಅಝೀಝ್ ಉದ್ಯಾವರ, ಜಿ.ಎಮ್ ಶರೀಫ್, ಮಂಜುನಾಥ್ ಬಾಳ್ಕುದ್ರು, ನಾಗೇಶ್ ಉದ್ಯಾವರ,ಎಸ್.ಐ.ಓನ ಆಯಾನ್ ಮಲ್ಪೆ,ಬರಹಗಾರ ಸಂವರ್ತ್ ಸಾಹಿಲ್ ಉಪಸ್ಥಿತರಿದ್ದರು.

IMG20240315164138 1710504802181 Featured Story, Udupi

IMG20240315164150 1710504801827 Featured Story, Udupi

IMG20240315165121 1710504802371 Featured Story, Udupi

IMG20240315172016 1710504800846 Featured Story, Udupi

IMG20240315170150 1710504801175 Featured Story, Udupi

IMG20240315170820 1710504801418 Featured Story, Udupi

Latest Indian news

Popular Stories