ಬಿಗ್ ರಿಲೀಫ್ ಕೊಟ್ಟ ಮಳೆ: ಉಡುಪಿ ನಗರಕ್ಕೆ ನಿರಂತರ ನೀರು ಸರಬರಾಜು

ಉಡುಪಿ, ಮೇ 25 (THG NEWS): ಜಿಲ್ಲೆಯಾದ್ಯಂತ ಹಾಗೂ ಪಶ್ಚಿಮ ಘಟ್ಟದಲ್ಲಿ ಮಳೆ ಸುರಿಯುತ್ತಿರುವುದರಿಂದ ಕಾರ್ಕಳದಲ್ಲಿರುವ ಮುಂಡ್ಲಿ ಅಣಿಕಟ್ಟಿನಲ್ಲಿ ನೀರು ತುಂಬಿದ್ದು, ಸದ್ರಿ ಅಣಿಕಟ್ಟಿನ 2 ಬಾಗಿಲುಗಳನ್ನು ತೆರೆದಿರುವುದರಿಂದ ಸ್ವರ್ಣ ನದಿಯಲ್ಲಿ ಒಳಹರಿವು ಹೆಚ್ಚಾಗಿರುವುದರಿಂದ ಸ್ವರ್ಣ ನದಿಯ ಬಜೆ ಡ್ಯಾಂನಲ್ಲಿ ಸಾಕಷ್ಟು ಪ್ರಮಾಣದ ನೀರು ತುಂಬಿದ್ದು, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಇಂದಿನಿಂದ ರೇಶನಿಂಗ್ ಪದ್ಧತಿಯ ನೀರನ್ನು ರದ್ದುಪಡಿಸಿ ನಿರಂತರವಾಗಿ ಉಡುಪಿ ನಗರಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ

Latest Indian news

Popular Stories