ಶಿರ್ವ: ಮತ್ತೆ ಮತ್ತೆ ಆನ್ಲೈನ್ ವಂಚನೆಗೆ ಬೀಳುತ್ತಿರುವ ಜನ – 9 ಲಕ್ಷ ಕಳೆದುಕೊಂಡ ಮಹಿಳೆ!

ಶಿರ್ವ: ಎಷ್ಟೊಂದು ಜಾಗೃತಿ, ವಿನಂತಿಯ ನಂತರವೂ ಉಡುಪಿ ಜಿಲ್ಲೆಯಲ್ಲಿ ಆನ್ಲೈನ್ ವಂಚನಾ ಜಾಲಕ್ಕೆ ಸಿಲುಕುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿಕೊಳ್ಳುತ್ತಿರುವ ಕುರಿತು ದಿನ ನಿತ್ಯ ವರದಿಯಾಗುತ್ತಿದ್ದು ನಿಜಕ್ಕೂ ಆತಂಕಕಾರಿ ಬೆಳವಣಿಯಾಗಿದೆ‌

ಇದೀಗ ಶಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದ್ದು ಮಾಯಾ (38) ಎಂಬುವವರನ್ನು ಆನ್ಲೈನ್ ಖದೀಮರು ವಂಚಿಸಿದ್ದಾರೆ.

ವಾಟ್ಸ್‌ಆಫ್‌ಗೆ IFME 11 Pantheon ಎಂಬ ವಾಟ್ಸ್‌ಆಫ್‌ ಗ್ರೂಪ್‌ನಿಂದ ರಿಕ್ವೆಸ್ಟ್‌ ಬಂದಿದ್ದು ಈ ಗ್ರೂಪ್‌ಗೆ ಸೇರಿದ್ದಾರೆ. ಈ ಗ್ರೂಪ್‌ನಲ್ಲಿ Assistant Manager ಎಂದು ಮನೋಜ್‌ ಕುಮಾರ್‌ ಪರಿಚಯಿಸಿಕೊಂಡಿದ್ದು Asset Management and Account ಇದರ ಬಗ್ಗೆ Treding Account ಎಂದು ಪರಿಚಯಿಸಿದ್ದಾನೆ.

Pt-vc ಎಂಬ Asset Management ಅಪ್ಲಿಕೇಶನ್‌ನ್ನು ಡೌನ್‌ಲೋಡ್‌ ಮಾಡುವಂತೆ ತಿಳಿಸಿದ ಮೇರೆಗೆ ಗೂಗಲ್‌ಪ್ಲೇ ಸ್ಟೋರ್‌ ಮುಖೇನ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಬ್ಯಾಂಕ್‌ ಆಫ್‌ ಬರೋಡ ಖಾತೆಯಿಂದ ಗೂಗಲ್‌ಪೇ ಮಖಾಂತರ ದಿನಾಂಕ 28/01/2024 ರಿಂದ ಹಂತ ಹಂತವಾಗಿ 2,30,000/- ರೂಪಾಯಿ ವಾಟ್ಸ ಆಪ್‌ನಲ್ಲಿ ತಿಳಿಸಿದ ಗೂಗಲ್‌ಪೇ ನಂಬ್ರಕ್ಕೆ ಕಳುಹಿಸಿದ್ದಾರೆ. ಬಳಿಕ ದಿನಾಂಕ 06/02/2024 ರಂದು ಖಾತೆಯಿಂದ ಹಂತ ಹಂತವಾಗಿ 3,00,000/- ರೂಪಾಯಿ ಕಳುಹಿಸಿದ್ದಾರೆ.

ದಿನಾಂಕ 12/02/2024 ರಂದು VIP Exclusive Group ವಾಟ್ಸ್‌ಆಫ್‌ಗ್ರೂಪ್ ನಲ್ಲಿ ರಿಟರ್ನ್‌ ಹಣವನ್ನು ಕೇಳಿದಾಗ 21,000/- ರೂಪಾಯಿ ಖಾತೆಗೆ ಬಂದಿರುತ್ತದೆ.

ದಿನಾಂಕ: 13/02/2024 ರಂದು ಪಿರ್ಯಾದಿದಾರರು ಹಣವನ್ನು ಕೇಳಿದಾಗ 2,00,000/- ರೂಪಾಯಿ ವಾಪಾಸು ಖಾತೆಗೆ ಬಂದಿದೆ.. ಬಳಿಕ ದಿನಾಂಕ 14/02/2024 ರಿಂದ ಬ್ಯಾಂಕ್‌ಆಫ್‌ ಬರೋಡ ಖಾತೆಯಿಂದ ಹಂತ ಹಂತವಾಗಿ 4,00,000/- ರೂಪಾಯಿ ಕಳುಹಿಸಿದ್ದು, ಹೀಗೆ ಖಾತೆಯಿಂದ ರೂಪಾಯಿ 9,30,000/- ಹಣವನ್ನು ಅವರು ತಿಳಿಸಿದ ವಿವಿಧ ಖಾತೆಗಳಿಗೆ ಕಳುಹಿಸಿದ್ದು, ದಿನಾಂಕ 14/02/2024 ರಿಟರ್ನ್‌ ಹಣವನ್ನು ಕೇಳಿದಾಗ 40% ಪ್ರಾಫಿಟ್‌ ಕೊಡಿ ಕಂಪೆನಿ ಲಿಕ್ವಿಡೇಟ್‌ ಮಾಡುತ್ತಾರೆ 2 ವರ್ಕಿಂಗ್‌ ಡೇಸ್‌ನಲ್ಲಿ ನಿಮ್ಮ ಹಣ ವಾಪಾಸು ಬರುತ್ತದೆ ಎಂದು ವಾಟ್ಸ್‌ ಆಪ್‌ ಮೆಸೆಜ್‌ ಮಾಡಿರುತ್ತಾರೆ. ಈ ಮೆಸೇಜ್‌ನ್ನು ನೋಡಿದಾಗ ಸಂಶಯ ಬಂದು Pt-vc ಎಂಬ Asset Management ಅಪ್ಲಿಕೇಶನ್‌ನಲ್ಲಿ ಅಪ್ ಡೇಟ್‌ನ್ನು ನೋಡಿದಾಗ ಝೀರೋ ಬ್ಯಾಲೆನ್ಸ್‌ ಇರುತ್ತದೆ. ಈ ವಿಚಾರವನ್ನು ಗಮನಿಸಿದಾಗ ಅವರುಗಳು ದಿನಾಂಕ 15/11/2023 ರಿಂದ ವಾಟ್ಸ್‌ಆಪ್‌ ಮುಖೇನ ಸಂದೇಶಗಳನ್ನು ಕಳುಹಿಸಿ ಈ ಸಂದೇಶದಲ್ಲಿ 300 ಪಟ್ಟು ಹೆಚ್ಚಿನ ಹಣ ಸಿಗುವುದಾಗಿ ನಂಬಿಸಿ ವಾಟ್ಸ್‌ಆಫ್‌ನಲ್ಲಿ ಮೆಸೇಜ್‌ ಮಾಡಿ ಆನ್‌ಲೈನ್‌ ಮುಖೇನ ಒಟ್ಟು ರೂಪಾಯಿ 9,30,000/- ಹಣವನ್ನು ಪಡೆದು ಮೋಸ ಮಾಡಲಾಗಿದೆ.

ದೂರಿನಂತೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 18/2024 ಕಲಂ: 66 (D) IT Act ಮತ್ತು 406, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories