ಅಸಮಾಧಾನಗೊಂಡಿರುವ ರಘುಪತಿ ಭಟ್ರನ್ನು ಸಮಜಾಯಿಸಲು ದೌಡಾಯಿಸಿದ ಬಿಜೆಪಿ ತಂಡ

ನೈರುತ್ಯ ಪದವೀದರ ಕ್ಷೇತ್ರದ ವಿಧಾನ ಪರಿಷತ್ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ರವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದು ರವಿವಾರ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ಹೊರ ಹಾಕಿದ್ದರು.

ಅವರನ್ನು ಉಡುಪಿಯಲ್ಲಿನ ಅವರ ಮನೆಗೆ, ಜಿಲ್ಲಾ ಬಿಜೆಪಿಯ ತಂಡ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಅವರ ನೇತೃತ್ವದಲ್ಲಿ ತೆರಳಿ ರಘುಪತಿ ಭಟ್ ರನ್ನು ಸಮಾಧಾನ ಪಡಿಸಿ ಮನವೊಲಿಸಲು ಪ್ರಯತ್ನಿಸಲಾಯಿಗಿದೆ. ಆದರೆ ಮಾತುಕತೆ ಸದ್ಯಕ್ಕೆ ವಿಫಲವಾಗಿದೆ.

ಇದೀಗ ಸುದ್ದಿಗೋಷ್ಟಿ ನಡೆಸಿ ಪಕ್ಷೇತರವಾಗಿ ನಿಲ್ಲುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Latest Indian news

Popular Stories