ಚಾಲಕನಿಗೆ ಎದೆ ನೋವು ;ಕೆಳ ಪರ್ಕಳದಲ್ಲಿ ಹಿಂದಕ್ಕೆ ಚಲಿಸಿದ ಬಸ್ | ಪ್ರಯಾಣಿಕರು ಪಾರು

ಉಡುಪಿ: ಪರ್ಕಳ ಕೆನರಾ ಬ್ಯಾಂಕಿನ ಸಮೀಪದ ತಿರುವಿನ ಡಾಂಬಾರು ರಸ್ತೆಯಲ್ಲಿ ಉಡುಪಿಯಿಂದ ಬೈರಂಜೆ ಹೋಗುವ ಸಿಟಿ ಬಸ್ ಹಿಂದಕ್ಕೆ ಸರಿದು ಬಲಭಾಗಕ್ಕೆ ಚಲಿಸಿ ಮೋರಿ ಬಳಿ ನಿಂತಿತು.

ಏರು ದಿನ್ನೆಯಲ್ಲಿ ಯಲ್ಲಿ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಬಸ್ಸು ಹಿಂದಕ್ಕೆ ಚಲಿಸಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.ಘಟನೆಯಲ್ಲಿ ಪ್ರಯಾಣಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆ. ತಕ್ಷಣ ಚಾಲಕನನ್ನು ಮಣಿಪಾಲ ಆಸ್ಪತ್ರೆಗೆ ಚಾಲಕನನ್ನು ದಾಖಲಿಸಲಾಗಿದೆ.

ಹಿಂಬದಿ ವಾಹನಗಳಿಲ್ಲದೇ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಒಟ್ಟಿನಲ್ಲಿ ಇಕ್ಕಟ್ಟಾದ ಕೆಳ ಪರ್ಕಳ ರಸ್ತೆ ಯಾವಾಗ ಅಗಲೀಕರಣವಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಿಂದಕ್ಕೆ ಚಲಿಸಿದ ಬಸ್ಸನ್ನು ಮೇಲೆ ಎತ್ತಲು ಮಣಿಪಾಲ ಪೊಲೀಸರು ಹರಸಹಾಸ ಪಟ್ಟರು‌‌. ನಂತರ ಕಾರ್ಯಾಚರಣೆ ನಡೆಸಿ ಬಸ್ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

1001319129 Udupi

Latest Indian news

Popular Stories