ಉಡುಪಿಯಲ್ಲಿ ನಡೆದ ಖುಜಕಿಸ್ಥಾನದ ಪ್ರಜೆಯ ಅಂತ್ಯಸಂಸ್ಕಾರ

 ಉಡುಪಿ, ಜೂ.11: ರಷ್ಯಾದ ಖುಜಕಿಸ್ಥಾನದ ಪ್ರಜೆಯೊರ್ವಳ ಅಂತ್ಯಸಂಸ್ಕಾರವು ಉನ್ನತ ಮಟ್ಟದ ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ, ಕ್ರಿಶ್ಚನ್ ಧರ್ಮಗಳ ನೇತ್ರತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಉಡುಪಿಯ ಸಿ.ಎಸ್.ಐ ಚರ್ಚಿನ ದಫನ ಭೂಮಿಯಲ್ಲಿ ಮಹಿಳೆ ಮೃತಪಟ್ಟು 35 ದಿನಗಳ ಬಳಿಕ ಸೋಮವಾರ ನಡೆಯಿತು. 

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾಯವರ ಅವರ ಮಾರ್ಗದರ್ಶನ ಹಾಗೂ ನಗರ ಪೋಲಿಸ್ ಠಾಣೆಯ ಎಸ್ ಐ ಪುನೀತ್ ಕುಮಾರ್, ತನಿಖಾ ಸಹಾಯಕಿ ಸುಷ್ಮಾ, ಹಾಗೂ ಠಾಣೆಯ ಸಿಬ್ಬಂದಿಗಳು ಕಾನೂನು ಪ್ರಕ್ರಿಯೆ ನಡೆಸಿದ್ದರು. ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ಸಭಾಪಾಲಕ ರೆವೆ ಜೋಸ್ ಬೆನೆಡಿಕ್ಟ್ ಅಮ್ಮನ್ನ ನೇರವೆರಿಸಿದರು, ವಿಶ್ರಾಂತ ಸಭಾಪಾಲಕ ರೆವೆ ಐಸನ್ ಸುಕುಮಾರ ಪಾಲನ್ನ, ಪಾಸ್ಟರ್ ಅಬ್ರಹಾಂ, ಪಾಸ್ಟರ್ ಜೋಯ್ಸ್ ಕುರಿಯ ಕೋನ್, ಸಮಾಜಸೇವಕ ನಿತ್ಯಾನಂದ ಒಳಕಾಡು, ಉಡುಪಿ ಚರ್ಚಿನ ಸದಸ್ಯರು, ಭಾಗಿಯಾಗಿದ್ದರು.

  ಉಡುಪಿಯ ನಿವಾಸಿ ದಿ. ಕುಲಿನ್ ಮಹೇಂದ್ರ ಷಾ, ಅವರೊಂದಿಗೆ ರಷ್ಯಾದ ಖುಜಕಿಸ್ಥಾನದ ಪ್ರಜೆಯಾ ಸುಲ್ತಾನೆಟ್ ಬೆಕ್ಟೆನೋವಾ ಅವರು 2009 ರಲ್ಲಿ ಮಣಿಪಾಲದ ಸಿ.ಎನ್.ಐ ಚರ್ಚಿನಲ್ಲಿ ವಿವಾಹವಾಗಿದ್ದರು.  ಉಡುಪಿಯ ಪುತ್ತೂರಿನಲ್ಲಿ ಬಾಡಿಗೆ ಮನೆಮಾಡಿಕೊಂಡು 13 ವರ್ಷದ ರೆಬೆಕಾ ಕುಲಿನ್ ಷಾ ಮಗಳೊಂದಿಗೆ ವಾಸವಾಗಿದ್ದರು. ಕಳೆದ ಮೇ 7 ರಂದು ಸುಲ್ತಾನೆಟ್ ಬೆಕ್ಟೆನೋವಾ (51ವ) ಸ್ನಾನದ ಕೊಠಡಿಯಲ್ಲಿ ಕುಸಿದುಬಿದ್ದಿದ್ದರು. ಮಾಹಿತಿ ತಿಳಿದ ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರು ಮಹಿಳೆ ಮೃತಪಟ್ಟಿರುವುದನ್ನು ಧೃಡಿಕರಿಸಿದ್ದರು. ಶವವನ್ನು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತು. ಘಟನೆ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ವಿದೇಶಿ ಮಹಿಳೆಯ ವಾರಸುದಾರರ ಪತ್ತೆಕಾರ್ಯವನ್ನು ನಗರ ಠಾಣೆಯ ಪೋಲಿಸರು ಭಾರತದ ರಾಯಭಾರಿ ಕಚೇರಿಯ ಸಹಕಾರದಿಂದ ಪತ್ತೆಗೊಳಿಸಿ ಯಶಸ್ವಿಯಾಗಿದ್ದರು. ವಿಷಯ ತಿಳಿದ ಮೃತ ಮಹಿಳೆಯ ಮಗ ಶವ ಪಡೆಯಲು ಭಾರತಕ್ಕೆ ಬರಲು ಅಸಹಾಯಕ ಸ್ಥಿತಿ ಎದುರಾದರಿಂದ, ಅಂತ್ಯಸಂಸ್ಕಾರ ನಡೆಸಲು ರಾಯಭಾರಿ ಕಚೇರಿಯ ಮೂಲಕ, ಮಣಿಪಾಲದ ಸಿ.ಎಸ್.ಐ ಚರ್ಚಿಗೆ ನಡೆಸುವಂತೆ ವಿನಂತಿಯನ್ನು ಮಿಂಚಂಚೆ ಮೂಲಕ ರವಾನಿಸಿದ್ದರು.

Latest Indian news

Popular Stories