ಉಡುಪಿ, ಸೆ.12: ನಿವೃತ್ತ ಶಿಕ್ಷಕಿಯೊಬ್ಬರು ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಿಟ್ಟೂರಿನಲ್ಲಿ ಇಂದು ನಡೆದಿದೆ.
ಹಿರಿಯ ವಕೀಲ ದಿವಂಗತ ವಿಲಿಯಂ ಪಿಂಟೋ ಅವರ ಪತ್ನಿ ರೋಸಿ ವಿಲಿಯಂ ಪಿಂಟೋ(72) ಎಂದು ಗುರುತಿಸಲಾಗಿದೆ.
ನಿಟ್ಟೂರು ಶಾಲೆಯ ನಿವೃತ್ತ ಶಿಕ್ಷಕಿಯಾಗಿರುವ ಇವರು, ಮನೆಯಲ್ಲಿ ಒಂಟಿಯಾಗಿ ವಾಸ ಮಾಡು ತ್ತಿದ್ದರು. ಇವರ ಮಕ್ಕಳು ಕರೆ ಮಾಡಿವಾಗ ಕರೆ ಎತ್ತದೆ ಇದ್ದ ಕಾರಣ ಮನೆಗೆ ಬಂದು ನೋಡುವಾಗ ಇವರು ಬಾತ್‌ರೂಮಿನಲ್ಲಿ ಕುಸಿದು ಬಿದ್ದು ಮೃತಪಟ್ಟಿ ರುವುದು ಕಂಡುಬಂತು.
ಸ್ಥಳಕ್ಕೆ ನಗರ ಠಾಣಾ ಅಧಿಕಾರಿ ಪುನೀತ್ ಕುಮಾರ್ ಬಿ.ಈ., ಎಎಸ್ಸೈ ನವೀನ್ ದೇವಾಡಿಗ ಭೇಟಿ ನೀಡಿ ಪರಿಶೀಲಿಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು