ಉಡುಪಿ ಸಿಟಿ ಆಸ್ಪತ್ರೆಯ ಹತ್ತಿರ ಮತ್ತು ಕಾಡುಬೆಟ್ಟು ಪರಿಸರದಲ್ಲಿ ರಾತ್ರಿ ಹೊತ್ತಿನಲ್ಲಿ ವಿನಾಕಾರಣ ದಾಂಧಲೆ ನಡೆಸುತ್ತ ಭಯದ ವಾತಾವರಣ ಸೃಷ್ಟಿಸಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಹಾಗೂ, ನಗರ ಪೋಲಿಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಿಯಾಝ್ ಮತ್ತು 112 ಪೋಲಿಸ್ ತುರ್ತು ಸಾಹಯವಾಣಿಯ ಸಿಬ್ಬಂದಿಗಳು ವಶಕ್ಕೆ ಪಡೆದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ.
ವಶಕ್ಕೆ ಪಟ್ಟಿರುವ ವ್ಯಕ್ತಿ ಮಾನಸಿಕ ವ್ಯಾಧಿಗೆ ಒಳಪಟ್ಟಿದ್ದು, ದಾಂಧಲೇ ನಡೆಸುವ ಸಂದರ್ಭ ಗಾಯಗೊಂಡಿದ್ದಾನೆ. ಜಿಲ್ಲಾಸ್ಪತ್ರೆಯ ಚಿಕಿತ್ಸೆಯ ಬಳಿಕ ಮಾನಸಿಕ ಚಿಕಿತ್ಸೆಗೆ ಒಳಪಡಿಸಬೇಕಾಗಿದೆ. ರೋಗಿಯ ಸಂಬಂಧಿಕರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ದಾಖಲು ಪ್ರಕ್ರಿಯೆ ನಡೆಸುವಾಗ ಯುವಕನು ಹೆಸರು ಸುಶೀಲ್ ಕೂಜೂರ್(35ವ), ತಂದೆ ದೋಪಿಲ್ ಕುಜೂರ್ ಒಡಿಶಾ ಎಂದು ಹೇಳಿಕೊಂಡಿದ್ದಾನೆ.