ಉಡುಪಿ: ಜಿಲ್ಲೆಯ ವಿವಿಧೆಡೆ ಕಳ್ಳತನ ನಡೆಸಿದ ಮೂವರು ಆರೋಪಿಗಳ ಬಂಧನ

ಉಡುಪಿ: ಜಿಲ್ಲೆಯ ವಿವಿಧೆಡೆ ನಡೆದ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮಂಗಳೂರು ನಂತೂರಿನ ಅರ್ಷಿತ್ ಅವಿನಾಶ್ ದೋಡ್ರೆ (23), ಬೈಂದೂರು ಪಡುವರಿಯ ರಿಲ್ವಾನ್ ಅಲಿಯಾಸ್ ರಿಝ್ವಾನ್ (24), ಯಡ್ತರೆಯ ಮಹಮ್ಮದ್ ಅರ್ಬಾಝ್ (23) ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ ಒಟ್ಟು 36,000 ರೂಪಾಯಿ ಮೌಲ್ಯದ ಹಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಹಾಗೂ 3 ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ.

IMG 20240330 WA0060 Udupi

ಇವರು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಗುಡ್ಡೆಯಂಗಡಿ ಗ್ರಾಮದ ಶಾನ್ ಮೆಡಿಕಲ್ ಶಾಪ್, ಬೈಂದೂರು ಠಾಣಾ ವ್ಯಾಪ್ತಿಯ ನಾಗೂರು ಎಂಬಲ್ಲಿ ಶ್ರೇಷ್ಠ ಮೆಡಿಕಲ್ ಶಾಪ್ ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯ ಖಾರ್ವಿಕೇರಿ ರಸ್ತೆಯಲ್ಲಿರುವ ಮಹಾಂಕಾಳಿ ಜನರಲ್ ಸ್ಟೋರ್ ಹಾಗೂ ಕೋಟಾ ಠಾಣಾ ವ್ಯಾಪ್ತಿಯ ಕೋಟ ಮೂರುಕೈ ಯಲ್ಲಿರುವ ವಿವೇಕ ಮೆಡಿಕಲ್ ಶಾಪ್, ಹಳ್ಳಾಡಿಯಲ್ಲಿರುವ ತಲ್ಲೂರು ಬಾರ್& ರೆಸ್ಟೋರೆಂಟ್, ಅಯ್ಯಂಗಾರ್ ಬೇಕರಿ, ಸಾಯಿಬ್ರಕಟ್ಟೆಯಲ್ಲಿರುವ ನಂದಿಕೇಶ್ವರ ಹೊಟೇಲಿನಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್ಐಗಳಾದ ಹರೀಶ್ ಆರ್., ಬಸವರಾಜ ಕನಶೆಟ್ಟಿ, ಸಿಬ್ಬಂದಿಗಳಾದ ಮೋಹನ, ನಾಗರಾಜ, ಚಂದ್ರಶೇಖರ, ಸಂದೀಪ್, ನಾಗರಾಜ, ದಿನೇಶ್ ಹಾಗೂ ನಿತಿನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Latest Indian news

Popular Stories