ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ದೌರ್ಜನ್ಯ ಖಂಡಿಸಿ ಉಡುಪಿ ನಾಗರಿಕರ ಪ್ರತಿಭಟನೆ | ಇಸ್ರೇಲ್ ಪ್ಯಾಲೆಸ್ಟೈನ್ ನಡುವೆ ನಡೆಯುತ್ತಿರುವುದು ಯುದ್ಧವಲ್ಲ “ಇಸ್ರೇಲ್” ನಡೆಸುತ್ತಿರುವ ಕ್ರೌರ್ಯ | ಪ್ರೊ.ಫಣಿರಾಜ್

ಉಡುಪಿ: ಪ್ಯಾಲೆಸ್ಟೈನೀಯರ ಮೇಲೆ ಇಸ್ರೇಲ್ ಮತ್ತು ಅಮೇರಿಕಾದ ಆಡಳಿತದ ದೌರ್ಜನ್ಯ ಖಂಡಿಸಿ ಉಡುಪಿಯ ಅಜ್ಜರಕಾಡಿನ ಹುತಾತ್ಮ ಚೌಕ್ ಬಳಿ ನಾಗರಿಕರು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ.ಫಣಿರಾಜ್, ” ಇಸ್ರೇಲ್ ಪ್ಯಾಲೆಸ್ಟೈನ್ ನಡುವೆ ನಡೆಯುತ್ತಿರುವುದು ಯುದ್ಧವಲ್ಲ ಕ್ರೌರ್ಯವಾಗಿದೆ. ಒಂದು ಕಡೆ ಬಲವನಾರು, ಇನ್ನೊಂದು ಕಡೆ ನೆಲಕ್ಕಾಗಿ ಬರೀ ಕೈಯಲ್ಲಿ ಹೋರಾಡುವ ಜನ ಸಮುದಾಯವಿದೆ” ಎಂದು ಹೇಳಿದರು.

1001202631 Prime news, Udupi

“ಇಸ್ರೇಲ್ ಅಧಿಕಾರ ಬದಬ್ಬಾಳಿಕೆಯ ಪ್ರತೀಕವಾಗಿದೆ. ಪ್ಯಾಲೆಸ್ಟೈನ್ ಅಂದರೆ ನ್ಯಾಯದ ಪ್ರತೀಕ. ಎರಡು ದೇಶಗಳ ನಡುವೆ, ಸಮಾನ ಶಕ್ತಿ ಇರುವ ಬಣಗಳ ನಡುವೆ ನಡೆಯುವ ಯುದ್ಧವಲ್ಲ. ಇದೊಂದು ಅನ್ಯಾಯದ ಪ್ರತೀಕವಾಗಿದೆ ಎಂದು ಹೇಳಿದರು.

ನಂತರ ಇಸ್ರೇಲ್ ಕ್ರೌರ್ಯದ ಸುದೀರ್ಘ ಇತಿಹಾಸ ಬಿಚ್ಚಿಟ್ಟ ಪ್ರೊ.ಫಣಿರಾಜ್ ಇಸ್ರೇಲ್ ಯಾವ ರೀತಿಯಲ್ಲಿ ದಬ್ಬಾಳಿಕೆ ನಡೆಸಿ ಪ್ಯಾಲೆಸ್ಟೈನ್ ಅರಬರ ಭೂಮಿ ಕಬಳಿಸಿದೆ. ಮತ್ತು ಅದಕ್ಕಾಗಿ ಅಮೇರಿಕಾ, ಬ್ರಿಟಿಷ್ ವಸಾಹತುಶಾಹಿ ಮತ್ತು ಫ್ರಾನ್ಸ್ ಶಕ್ತಿಗಳು ಹೇಗೆ ಸಹಾಯ ಮಾಡಿದೆ ಎಂದು ವಿವರಿಸಿದರು. ಇಂತಹ ವಸಾಹತುಶಾಹಿ ಧೋರಣೆಗಳನ್ನು ಹೊಂದಿರುವವರನ್ನು ವಿರೋಧಿಸಬೇಕು. ಭಾರತದಲ್ಲೂ ಕೆಲವರು ಇಸ್ರೇಲ್ ಪರ ಮಾತನಾಡುತ್ತಾರೆ. ಅದು ಅಮಾನವೀಯತೆಯಾಗಿದೆ ಎಂದು ಹೇಳಿದರು.

ನಂತರ ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇದ್ರೀಸ್ ಹೂಡೆ ಮಾತನಾಡಿ, “ಭಾರತ ಸರಕಾರ ಅಧಿಕೃತವಾಗಿ ಪ್ಯಾಲೆಸ್ಟೈನ್ ಬೆಂಬಲ ನೀಡಿದರೆ, ನಮ್ಮ ಪ್ರಧಾನಿ ಇಸ್ರೇಲ್ ಪರ ಮಾತನಾಡುತ್ತಾರೆ. ಈ ದಂದ್ವ ನಿಲುವು ಯಾಕೆ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು. ಅಮೇರಿಕಾ ಶಸ್ತ್ರಾಸ್ತ್ರಗಳನ್ನು ಮಾರಿ‌ ಬದುಕಲು ಯುದ್ಧಗಳನ್ನು ಉತ್ತೇಜಿಸುತ್ತದೆ. ಅದರ ಭಾಗ ಈ ಸಂಘರ್ಷವಾಗಿದೆ” ಎಂದರು.

1001202630 Prime news, Udupi

“ಇಸ್ರೇಲ್ ಹಸುಳೆಗಳ ಮೇಲೆ, ಅಮಾಯಕ ನಾಗರಿಕರ ಮೇಲೆ, ಮಹಿಳೆಯರ‌ ಮೇಲೆ ದೌರ್ಜನ್ಯ ಎಸಗುತ್ತಿದೆ. ಇದನ್ನು ಪ್ರತೀಕಾರ ಎನ್ನಲಾಗುವುದಿಲ್ಲ. ಇದು ಅನ್ಯಾಯವಾಗಿದೆ. ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಇಸ್ರೇಲ್ ಪ್ರಯತ್ನಿಸುತ್ತಿದ್ದು ಇದಕ್ಕೆ ಝಿಯೋನಿಷ್ಠ್ ವ್ಯಾಪಾರಿಗಳು ನಿಯಂತ್ರಿಸುವ ಅಮೇರಿಕಾದ ಆಡಳಿತ ಸಾಥ್‌ ನೀಡುತ್ತಿದೆ” ಎಂದು ಆಕ್ರೋಶ ಹೊರ ಹಾಕಿದರು.

ದಲಿತ ಮುಖಂಡ, ಸಾಮಾಜಿಕ ಕಾರ್ಯಕರ್ತ ಸುಂದರ್ ಮಾಸ್ತರ್, ಸುರೇಶ್ ಕಲ್ಲಾಗರ್, ಚಂದ್ರಶೇಖರ್ ಸೇರಿದಂತೆ ಹಲವಾರು ಮಂದಿ ಮಾತನಾಡಿದರು.

1001202632 Prime news, Udupi
1001202633 Prime news, Udupi
1001202634 Prime news, Udupi

ಈ ಸಂದರ್ಭದಲ್ಲಿ ಸೌಹಾರ್ದ ಕರ್ನಾಟಕ ಮತ್ತು ಸಮಾನ‌ ಮನಸ್ಕ ಸಂಘಟನೆಗಳ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕವಿರಾಜ್, ಇಸ್ಮಾಯಿಲ್ ಕಟಪಾಡಿ, ಅಬ್ದುಲ್ ಕಾದೀರ್ ಮೊಯ್ದಿನ್ ಹೂಡೆ, ಎಸ್.ಐ.ಓ ವಿದ್ಯಾರ್ಥಿ ಸಂಘಟನೆಯ ಆಯಾನ್ ಮಲ್ಪೆ, ವಾಸುದೇವ್, ಇಕ್ಬಾಲ್ ಮನ್ನಾ, ಅಬ್ದುಲ್ ಅಝೀಜ್ ಉದ್ಯಾವರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Latest Indian news

Popular Stories