ಉಡುಪಿ | ಅವಳಿ ಶಿಶುಗಳ ಮೃತ್ಯು – ಸಮಾಜಸೇವಕರಿಂದ ಅಂತ್ಯಸಂಸ್ಕಾರ !

ಉಡುಪಿ,ಮಾ.18; ಅವಳಿ ಗಂಡು ಶಿಶುಗಳ ಅಂತ್ಯಸಂಸ್ಕಾರ ನಡೆಸಲು, ಮನೆ ಮಂದಿಗೆ ಅಸಹಾಯಕ ಪರಿಸ್ಥಿತಿ ಎದುರಾದಗ, ಸಮಾಜಸೇವಕ ನಿತ್ಯಾನಂದ ಒಳಕಾಡುವರು, ನೆರವಿಗೆ ಬಂದು ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದೆರು.

ಬಾಗಲಕೋಟೆಯ ಹುಲಿಗಮ್ಮ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾದ ಹುಲಿಗಮ್ಮ ಅವಳಿ ಗಂಡು ಶಿಶುಗಳಿಗೆ ರವಿವಾರ ಜನ್ಮ ನೀಡಿದಳು. ಎರಡು ಶಿಶುಗಳು ಮೃತಪಟ್ಟವು. ನಡು ರಾತ್ರಿಯ ಸಮಯದಲ್ಲಿ ಅಂತ್ಯಸಂಸ್ಕಾರ ನಡೆಸಲು ಮಹಿಳೆಯ ಸಂಬಂಧಿಕರಿಗೆ ಅಸಹಾಯಕತೆ ಎದುರಾದಗ ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಿಗೆ ಬಂದು, ತಮ್ಮ ಮನೆಯಲ್ಲಿಯೇ ಶೀತಲೀಕೃತ ಶವ ರಕ್ಷಣಾ ಯಂತ್ರದಲ್ಲಿ ಅವಳಿ ಶಿಶುಗಳ ಕಳೇಬರವನ್ನು ಒಂದು ರಾತ್ರಿ ರಕ್ಷಿಸಿಟ್ಟು, ಮರುದಿನ ಬೆಳಿಗ್ಗೆ ಇಂದ್ರಾಳಿಯ ರುದ್ರ ಭೂಮಿಯಲ್ಲಿ ಗೌರಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು.

Latest Indian news

Popular Stories