ಉಡುಪಿ: ನಿಟ್ಟೂರು ಪೆಟ್ರೋಲ್ ಪಂಪ್ ಬಳಿ ಬಸ್-ಬೈಕ್ ಭೀಕರ ಅಪಘಾತ – ಸವಾರ ಮೃತ್ಯು

ಉಡುಪಿ: ನಿಟ್ಟೂರು ಪೆಟ್ರೋಲ್ ಪಂಪ್ ಬಳಿ ಬಸ್ ಮತ್ತು ಬೈಕ್ ಭೀಕರ ಅಪಘಾತ ನಡೆದಿದ್ದು ಮಾಹಿತಿಯ ಪ್ರಕಾರ ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಖಾಸಗಿ ಬಸ್ ಮತ್ತು ಬೈಕ್ ಉಡುಪಿ ಕಡೆಯಿಂದ ಸಂತೆಕಟ್ಟೆಯತ್ತ ಸಾಗುತ್ತಿದ್ದಾಗ ಅಪಘಾತ ನಡೆದಿದ್ದು, ಅಪಘಾತದಲ್ಲಿ ಸವಾರನಿಗೆ ತಲೆಗೆ ಗಂಭೀರವಾದ ಗಾಯವಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.

ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ‌ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

1000930925 Udupi, Accident News

Latest Indian news

Popular Stories