ಉಡುಪಿ | ಹೂಡೆಯಲ್ಲಿ ತೆಂಗಿನಕಾಯಿ ನಾರು ಸಾಗಿಸುತ್ತಿದ್ದ ಗೂಡ್ಸ್ ವಾಹನಕ್ಕೆ ಬೆಂಕಿ : ತಪ್ಪಿದ ಮಹಾ ದುರಂತ!

ಹೂಡೆ: ಕೆನರಾ ಬ್ಯಾಂಕ್ ಬಳಿ ತೆಂಗಿನ ಕಾಯಿ ನಾರು ಸಾಗಿಸುತ್ತಿದ್ದ ವಾಹನಕ್ಕೆ ರಾತ್ರಿ ಬೆಂಕಿ ತಗುಲಿ ಸುಟ್ಟ ಘಟನೆ ವರದಿಯಾಗಿದೆ.

ವಿದ್ಯುತ್ ತಂತಿ ತಗುಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಘಟನೆ ನಡೆದಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ‌. ತಕ್ಷಣ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಸೇಲ್ ಟ್ಯಾಂಕ್’ಗೆ ಬೆಂಕಿ ತಗಲುವ ಮುನ್ನ ಅಗ್ನಿ ನಂದಿಸುವಲ್ಲಿ ಯಶಸ್ವಿಯಾದ ಕಾರಣ ಭೀಕರ ದುರಂತವೊಂದು ತಪ್ಪಿದೆ.

1002433449 Udupi

ಪಕ್ಕದಲ್ಲೆ ವಸತಿ, ಹೊಟೇಲ್,ಅಂಗಡಿ, ಕೆಫೆಯಿದ್ದು ಬೆಂಕಿ ವ್ಯಾಪಿಸಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಸೂಕ್ತ ಸಮಯದಲ್ಲಿ ಅಗ್ನಿ ಶಾಮಕ ದಳದ ವಾಹನ ಆಗಮಿಸಿ ಬೆಂಕಿ ನಂದಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ.

ಈ ಭಾಗದಲ್ಲಿ ವಿದ್ಯುತ್ ತಂತಿ ಜೋತು ಬಿದ್ದು ಹಲವು ಬಾರಿ ಶಾರ್ಟ್ ಸರ್ಕ್ಯೂಟ್ ನಿಂದ ಕಿಡಿ ಹಾರುತ್ತಿರುತ್ತದೆ. ಇದೀಗ ಇಂತಹ ದೊಡ್ಡ ಅನಾಹುತವಾಗಿದೆ‌. ಈ ಕುರಿತು ವಿದ್ಯುತ್ ಇಲಾಖೆಯವರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

Latest Indian news

Popular Stories