ಉಡುಪಿ: 31 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದಿರುವ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸಾದ್ (57), ಬಡಗುಬೆಟ್ಟು, ಉಡುಪಿ ಇವರು ತಂದೆಯವರನ್ನು ಆರೈಕೆ ಮಾಡಲು 15 ದಿನಗಳ ಸಿದ್ದಪ್ಪ ಕೆ ಕೊಡ್ಲಿ ಎಂಬುವವರನ್ನು ಹೋಮ್ ನರ್ಸ್ ಆಗಿ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು.
ಸಿದ್ದಪ್ಪ ಕೆ ಕೊಡ್ಲಿ ದಿನಾಂಕ 17/11/2024 ರಂದು ಬೆಳಿಗ್ಗೆ 9:15 ಗಂಟೆಯಿಂದ ಮಧ್ಯಾಹ್ನ 1:15 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಹಾಲ್ ನಲ್ಲಿರುವ ಗಾಜಿನ ಬೀರಿನ ರ್ಯಾಕ್ ನ ಮೇಲಿಟ್ಟಿದ್ದ 6 ಗ್ರಾಂ ತೂಕದ ಸುಮಾರು 43,800/-ರೂಪಾಯಿ ಮೌಲ್ಯದ ವಜ್ರದ ಒಂದು ಜೊತೆ ಕಿವಿ ಓಲೆ ಹಾಗೂ ದೂರುದಾರರು ಮನೆಯಲ್ಲಿ ಮಲಗುವ ರೂಂ ನಲ್ಲಿರುವ ಗಾಡ್ರೆಜ್ನ ಸಿಕ್ರೇಟ್ ಲಾಕರ್ನಲ್ಲಿಟ್ಟಿದ್ದ ಅಂದಾಜು 427 ಗ್ರಾಂ ತೂಕದ ರೂಪಾಯಿ 31,17,100/- ರೂಪಾಯಿಗಳಷ್ಟು ಬೆಲೆ ಬಾಳುವ ಚಿನ್ನ, ವಜ್ರಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 194/2024 ,ಕಲಂ: 306 BNS ರಂತೆ ಪ್ರಕರಣ ದಾಖಲಾಗಿರುತ್ತದೆ.