ಉಡುಪಿ | ಗ್ಯಾರೆಂಟಿ ಯೋಜನೆ ನಿಲ್ಲಿಸೋದಿಲ್ಲ – ಗೃಹ ಸಚಿವ ಪರಮೇಶ್ವರ್

ಉಡುಪಿ: ಉಡುಪಿಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಮಾಧ್ಯಮದವರರೊಂದಿಗೆ ಮಾತನಾಡಿ, “ಲೋಕಸಭಾ ಚುನಾವಣೆಯಲ್ಲಿ ಬಹಳಷ್ಟು ಕಡೆ ನಾವು ಸೋತಿದ್ದೇವೆ./ಸೋಲಿನ ವಿಶ್ಲೇಷಣೆ ಆತ್ಮಾವಲೋಕನ ಮಾಡಬೇಕಿದೆ.ಯಾಕೆ ಸೋತಿದ್ದೇವೆ ಎಲ್ಲಿ ಎಡವಿದ್ದೇವೆ ಎಂಬೂದು ಚರ್ಚೆಯಾಗಬೇಕಿದೆ” ಎಂದು ಹೇಳಿದರು.

ಜನಸಾಮಾನ್ಯರ ಬಡತನ ನಿರ್ಮೂಲನೆಗೆ ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದ್ದೆವು.ಜನಕ್ಕೆ ಗ್ಯಾರೆಂಟಿ ತಲುಪಿದೆ, ಎಲ್ಲಾ ಯೋಜನೆ ಅನುಷ್ಠಾನ ಆಗಿದೆ.ಸಿಎಂ, ಅಧ್ಯಕ್ಷ ಡಿಕೆಶಿ ನಾನು ಈ ಬಗ್ಗೆ ಚರ್ಚೆ ಮಾಡಿದ್ದೇವೆ.ಸಮಿತಿ ಮಾಡಿ, ಹಿರಿಯರು‌ ಅನುಭವಿಗಳ ವಿಶ್ಲೇಷಣೆ ಮಾಡಲು ತೀರ್ಮಾನಿಸಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಲೆಕ್ಕಕೊಡಬೇಕಾಗ್ತದೆ. ಸಮಿತಿ ರಚನೆಯಾಗಿ ನಡೆಯುವ ಚರ್ಚೆಯಲ್ಲಿ ಸುರ್ಜೇವಾಲಾ ಕೂಡಾ ಭಾಗಿಯಾಗಬಹುದು. ಗ್ಯಾರೆಂಟಿ ಯೋಜನೆ ನಿಲ್ಲಿಸೋದಿಲ್ಲ ಗ್ಯಾರೆಂಟಿ ರಾಜಕೀಯ ಉದ್ದೇಶಕ್ಕಲ್ಲ. ಪಟ್ಟಣ ಪ್ರದೇಶದಲ್ಲಿ ಗ್ಯಾರೆಂಟಿ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ‌ಹೇಳಿದರು.

ಹಳ್ಳಿ, ಗ್ರಾಮೀಣ ಭಾಗದ ಜನಕ್ಕೆ ಈ ಯೋಜನೆ ಉಪಯೋಗವಾಗ್ತಾಯಿದೆ. ಗ್ಯಾರೆಂಟಿ ಜೊತೆ ಅಭಿವೃದ್ಧಿ ಕಾರ್ಯ ಕೂಡಾ ಮಾಡ್ತೇವೆ. ರಾಜ್ಯದ ಬಜೆಟ್ ಗಾತ್ರ ಹಿಗ್ಗಿದೆ ಅಭಿವೃದ್ಧಿಗೆ ಹಣಕಾಸು ವ್ಯವಸ್ಥೆ ಇದೆ. ಹಣಕಾಸು ಮತ್ತು ವಿವಿಧ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆ ಇಲ್ಲ ಎಂದರು.

ಎನ್​ಡಿಎ ಎಷ್ಟು ಸುಭದ್ರ ಎಂದು ಕಾದು ನೋಡೋಣ
ಎನ್‌ಡಿಎ 400 ಸೀಟ್ ಬರುತ್ತದೆ ಎಂದು ಅವರು ನಿರೀಕ್ಷಿಸಿದ್ದರು. ಜನ ಬಿಜೆಪಿ, NDAಯನ್ನು ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟ. ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ನ ವೋಟ್ ಶೇರ್ ಹೆಚ್ಚಾಗಿದೆ.
ಬಿಜೆಪಿಯವರು ನಿರೀಕ್ಷೆ ತಲುಪಿಲ್ಲ, ನಾವು ನಮ್ಮ ನಿರೀಕ್ಷೆಗೂ ತಲುಪಿಲ್ಲ. ಕಾಂಗ್ರೆಸ್ ಸ್ವಲ್ಪ ಫೈನ್ ಟ್ಯೂನಿಂಗ್ ಮಾಡಿಕೊಳ್ಳಬೇಕಾಗುತ್ತದೆ ಮುಂದಿನ ದಿನದಲ್ಲಿ ಮಾಡುತ್ತೇವೆ. ಡಿಬ್ಯಾಕ್ ಆಗಿದೆ ಎಂದು ಯಾರು ಹೇಳಿದ್ದಾರೆ ನಾವು ಒಂದರಿಂದ 9ಕ್ಕೆ ಹೋಗಿದ್ದೇವೆ.ಬಮಾಧ್ಯಮದ ವಿಶ್ಲೇಷಣೆ ಇರಬಹುದು ನಮಗೆ ಡಿ ಬ್ಯಾಕ್ ಆಗಿಲ್ಲ. ರಾಜ್ಯದಲ್ಲಿ 20 – 28 ಗೆಲ್ಲಬೇಕು ಎಂಬ ನಿರೀಕ್ಷೆ ಇತ್ತು. ನರೇಂದ್ರ ಮೋದಿ ಅವರಿಗೆ ಹಿನ್ನಡೆ ಆಗಲಿಲ್ಲವೇ? ಬರೀ ನಮ್ಮ ಬಗ್ಗೆ ಯಾಕೆ ಹೇಳುತ್ತೀರಿ ಅವರ ಬಗ್ಗೆ ಮಾತಾಡಿ. ಬಿಜೆಪಿಗೆ 240 ಸೀಟು ಅಂದ್ರೆ ಹಿನ್ನಡೆ ಅಲ್ವಾ? ಎಂದು ಹೇಳಿದರು.

ವಾಲ್ಮೀಕಿ ನಿಗಮ ಸಚಿವ ನಾಗೇಂದ್ರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, “ಈ ಬಗ್ಗೆ ಅವರು ತೀರ್ಮಾನ ತೆಗೆದುಕೊಳ್ಳಬೇಕು. ಯಾರು ಕೂಡ ಒತ್ತಾಯ ಮಾಡಿ ರಾಜೀನಾಮೆ ಕೊಡಿ ಎಂದು ಹೇಳಲು ಆಗಲ್ಲ. ಮುಖ್ಯಮಂತ್ರಿಗಳು ಕೂಡ ರಾಜೀನಾಮೆಗೆ ಒತ್ತಾಯ ಮಾಡಿಲ್ಲ. ನಾವು ತನಿಖೆ ಪ್ರಾರಂಭ ಮಾಡಿದ್ದೇವೆ, sit ಮಾಡಿದ್ದೇವೆ. ಇದು ಬ್ಯಾಂಕ್ ಫ್ರಾಡ್ ಆಗಿರುವುದರಿಂದ, ಮೂರು ಕೋಟಿಗೂ ಅಧಿಕ ವಂಚನೆ ಆಗಿರುವುದರಿಂದ ಸ್ವಾಭಾವಿಕವಾಗಿ ಸಿಬಿಐ ತನಿಖೆ ಆಗುತ್ತೆ. ತನಿಖೆಯಲ್ಲಿ ಏನು ಬರುತ್ತೆ ಕಾದು ನೋಡೋಣ ಎಂದರು.

ಭೋವಿ ನಿಗಮದಲ್ಲಿ 100 ಕೋಟಿ ಹಗರಣ;

ಬಿಜೆಪಿ ಸರ್ಕಾರದ ಅವಧಿಯ ಹಗರಣ ಕುರಿತು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪ ವಿಚಾರವಾಗಿ ಮಾತನಾಡಿದ ಅವರು ಈ ಬಗ್ಗೆ ಯಾರಾದ್ರೂ ನಮಗೆ ದೂರು ಕೊಡಬೇಕು. ಖಂಡಿತವಾಗಿಯೂ ಈ ಬಗ್ಗೆ ತನಿಖೆ ಮಾಡುತ್ತೇವೆ. ಸರ್ಕಾರದ ಅವಧಿಯಲ್ಲಿ ಆಗಿದೆ ಅಂತ ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ. ಗೂಳಿಹಟ್ಟಿ ಶೇಖರ್ ನಮಗೆ ದೂರು ಕೊಟ್ಟರೆ ಸಾಕು ತನಿಖೆ ಮಾಡ್ತೇವೆ ಎಂದರು.

ಪ್ರಜ್ವಲ್ ರೇವಣ್ಣ ಪೆನ್ ಡ್ರೈ ಪ್ರಕರಣ:

ಸಂತ್ರಸ್ತ ಸ್ತ್ರೀಯರಿಗೆ ನಾವು ಧೈರ್ಯ ನೀಡಿದ್ದೇವೆ
ತನಿಖಾ ಸಂಸ್ಥೆಗಳ ಮುಂದೆ ಬಂದು ಹೇಳಿಕೆ ನೀಡಲು ಹೇಳಿದ್ದೇವೆ.ನಾನು ಮತ್ತು ಮುಖ್ಯಮಂತ್ರಿಗಳು ರಕ್ಷಣೆಯ ಭರವಸೆ ಕೊಟ್ಟಿದ್ದೇವೆ.ರಾಜ್ಯದ ಮೂರು ಸ್ಥಾನಗಳಲ್ಲಿ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಡಿಕೆ ಸುರೇಶ್ ಸ್ಪರ್ಧೆ ವಿಚಾರ ಪಕ್ಷದ ಅಧ್ಯಕ್ಷರಿಗೆ ಬೆಟ್ಟ ವಿಚಾರವಾಗಿದೆ. ರಾಜಕೀಯದ ತೀರ್ಮಾನಗಳನ್ನು ಅಧ್ಯಕ್ಷರು ಕೈಗೊಳ್ಳುತ್ತಾರೆ.ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.

Latest Indian news

Popular Stories