ಉಡುಪಿ: ಹಂಗಾರಕಟ್ಟೆ ಶಿಪ್’ಯಾರ್ಡ್ ಪೈಟಿಂಗ್ ಕಾರ್ಮಿಕ ಜಾರಿ ಬಿದ್ದು ಮೃತಪಟ್ಟ ಕುರಿತು ವರದಿಯಾಗಿದೆ.ಮೃತರನ್ನು ಉತ್ತರ ಪ್ರದೇಶದ ರಾಜು ಕೋರಿ (35) ಎಂದು ಗುರುತಿಸಲಾಗಿದೆ.
ಹಂಗಾರಕಟ್ಟೆ ವಾಟರ್ ವೇಸ್ ಶಿಪ್ ಯಾರ್ಡ ಪ್ರೈವೆಟ್ ಲಿಮಿಟೆಡ್ ಕಂಪೆನಿ ಎಂಬಲ್ಲಿ ಪೆಂಟಿಂಗ್ ಕೆಲಸ ಮಾಡಿಕೊಂಡಿದ್ದು, ಜೂನ್ 24 ರಂದು 6.30 ಗಂಟೆಗೆ ರಾಜು ಕೋರಿಯು ಪೇಂಟಿಂಗ್ ಕೆಲಸ ಮಾಡುವಾಗ ಕಾಲುಜಾರಿ ಸುಮಾರು 5 ಅಡಿ ಮೇಲಿನಿಂದ ಕೆಳಗೆ ಬಿದ್ದು ಕುತ್ತಿಗೆ ಹಿಂಬಾಗ ತೀವ್ರ ಸ್ವರೂಪದ ಪೆಟ್ಟಾಗಿತ್ತು. ಮೊದಲಿಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೂ, ಆಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಜು ಕೋರಿ ರವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ ಜುಲೈ 1 ರಂದು ಮೃತ ಪಟ್ಟಿರುತ್ತಾರೆ. ರಾಜು ಕೋರಿಯು ಕೆಲಸ ಮಾಡುವ ಸಮಯ ಆತನ ಸುರಕ್ಷತೆ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಯುಟಿಲಿಟಿ ಮ್ಯಾನೇಜರ್ ಸುನೀಲ್ ಪಾಟೀಲ ಹಾಗೂ ಸೇಫ್ಟಿ ಮ್ಯಾನೆಜರ್ ಶಂಕರ್ ಮೆನನ್ ಇವರಾಗಿರುವುದಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 152/2024 ಕಲಂ: 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.