ಉಡುಪಿ: ಮಗನಿಂದ ಕಿರುಕುಳ | ತಾಯಿ ಸಖಿ ಸೆಂಟರಿಗೆ ದಾಖಲು

ಉಡುಪಿ : ಮಾನಸಿಕ ಅಸ್ವಸ್ಥ ಮಗನ ಹಲ್ಲೆಗೆ ಹೆದರಿ ಜಿಲ್ಲಾಸ್ಪತ್ರೆಯಲ್ಲಿ ದು:ಖಿಸುತ್ತಿದ್ದ ಅಸಹಾಯಕ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಉಡುಪಿಯ ಸಖಿ ಸೆಂಟರಿಗೆ ದಾಖಲಿಸಿದ್ದಾರೆ.


ಕಾಪು ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಈ ಕುಟುಂಬದಲ್ಲಿ ಮಹಿಳೆಯ ಮಗ ಮಾನಸಿಕ ಅಸ್ವಸ್ಥಗೊಂಡು ನಿರಂತರ ತಾಯಿ ಮೇಲೆ ಹಲ್ಲೆ ನಡೆಸಿಕೊಂಡು ಬರುತ್ತಿದ್ದಾನೆ. ಇತ್ತೀಚಿಗೆ ಹಲ್ಲೆ ನಡೆಸಿ ತಾಯಿಯ ಕಾಲು ಮುರಿದಿದ್ದಾನೆ. ಈತನ ಮಾನಸಿಕ ಅಸ್ವಸ್ಥತೆ ಹೆಚ್ಚಿದ ಕಾರಣ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿಂತ ಆತ ಪರಾರಿಯಾಗಿದ್ದಾನೆ. ಇದರಿಂದ ಆತಂಕಿತರಾದ ತಾಯಿ ಮನೆಗೆ ಹೋಗಲು ಭಯ ಪಡುತ್ತಿದ್ದು, ತನಗೆ ರಕ್ಷಣೆ ಹಾಗೂ ಆಶ್ರಯ ನೀಡುವಂತೆ ಗೋಗರೆಯುತ್ತಿದ್ದರು.

ಮಹಿಳೆಯ ಆರ್ಥಿಕ ಪರಿಸ್ಥಿತಿ ಕೂಡಾ ಶೋಚನೀಯವಾಗಿದ್ದು, ಸಂಬAಧ ಪಟ್ಟ ಇಲಾಖೆಗಳು ಆಕೆಗೆ ಜೀವನ ನಡೆಸಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ವಿಶು ಶೆಟ್ಟಿ ಮನವಿ ಮಾಡಿದ್ದಾರೆ.

Latest Indian news

Popular Stories