ಉಡುಪಿ: ವಿದ್ಯಾರ್ಥಿಗಳ ಸುರಕ್ಷತೆಯ ಹಿತಾದೃಷ್ಟಿಯಿಂದ ರಜೆ ಘೋಷಣೆ ; ನಿಯಮ ಬಾಹಿರವಾಗಿ ತರಗತಿ ನಡೆಸಿದರೆ ಶಿಸ್ತು ಕ್ರಮ

ಉಡುಪಿ: ಜಿಲ್ಲಾಧಿಕಾರಿಗಳು/ತಾಲ್ಲೂಕು ದಂಡಾಧಿಕಾರಿಯವರು ಪ್ರಕೃತಿ‌ವಿಕೋಪದಡಿ ವಿಪರೀತ ಮಳೆ ಬರುವ ಮುನ್ಸೂಚನೆ ದಿನಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಹಿತಾದೃಷ್ಟಿಯಿಂದ ರಜೆ ಘೋಷಣೆ ಮಾಡಿದ ಸಂದರ್ಭಗಳಲ್ಲಿ ಕೆಲವು ಶಾಲೆಯವರು ಶಾಲೆ ಹಾಗೂ ವಿಶೇಷ ತರಗತಿಗಳನ್ನು  ನಡೆಸುವುದು ಮೇಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಶಾಲೆಗಳಲ್ಲಿ ನಿಯಮಬಾಹಿರವಾಗಿ ತರಗತಿಗಳನ್ನು‌ನಡೆಸಿ ಮಕ್ಕಳಿಗೆ ಅನಾಹುತಗಳು ಸಂಭವಿಸಿದಲ್ಲಿ ಅಂತಹ ಶಾಲೆಗಳ ಮುಖ್ಯೋಪಾಧ್ಯಾಯರ/ಶಿಕ್ಷಕರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು.

ವಿದ್ಯಾರ್ಥಿಗಳ ಹಿತಾದೃಷ್ಟಿಯಿಂದ ರಜೆ ಘೋಷಿಸಿದಲ್ಲಿ ಯಾವುದೇ ಕಾರಣಕ್ಕೂ ತರಗತಿಗಳನ್ನು ನಡೆಸದಂತೆ ಎಲ್ಲಾ ಶಾಲಾ ಮುಖ್ಯಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿರುವ ಕುರಿತು ಶಿಕ್ಷಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.

Latest Indian news

Popular Stories