ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕುಡಿಯುವ ನೀರಿನ ಅಭಾವ ಕಾಣುತ್ತಿರುವ ಲಕ್ಷ್ಮಣಗಳು ಇಗಾಗಲೇ ಕಂಡುಬಂದಿದೆ. ಉದ್ಭವಿಸಿರುವ ಸಮಸ್ಯೆಗೆ ಸಾಕ್ಷಿಯಂಬಂತೆ ನಗರದ ರಸ್ತೆಗಳಲ್ಲಿ ಕುಡಿಯುವ ನೀರು ಹೊತ್ತುಕೊಂಡು ಸಾಗುತ್ತಿರುವ ಟ್ಯಾಂಕರುಗಳು ಗೋಚರಿಸುತ್ತಿವೆ. ಉಡುಪಿಯ ಜನತೆಗೆ ಬಜೆ ಅಣೆಕಟ್ಟು ಕುಡಿಯು ನೀರು ಒದಗಿಸುವುತ್ತಿರುವುದಾಗಿದೆ.
ಬಜೆಯಿಂದ ಉಡುಪಿಯ ನಗರಕ್ಕೆ ನೀರಿನ ಸಂಪರ್ಕ ಕಲ್ಪಿಸುವ ಕೊಳವೆಯು ಹಿರಿಯಡ್ಕ, ಮಣಿಪಾಲ ಮಾರ್ಗವಾಗಿ ನೆಲದಡಿಯಿಂದ ಹಾದು ಬರುತ್ತದೆ. ಮದಗ ಗ್ರಾಮದಲ್ಲಿ ಅನುಕೂಲಕ್ಕೆ ತಕ್ಕಹಾಗೆ ನೀರು ರವಾನಿಸಲು ಮತ್ತು ತಡೆಹಿಡಿಯುವ ಚೆಂಬರ್ ಇದ್ದು, ಅದೇಷ್ಟೋ ಸಮಯದಿಂದ ಇಲ್ಲಿ ನೀರಿನ ಕೊಳವೆಯು ಘಾಸಿಗೊಂಡಿರುವುದರಿಂದ ನೀರು ಪೋಲಾಗುತ್ತಿದೆ. ಸಾರ್ವಜನಿಕರು ರಸ್ತೆಯಲ್ಲಿ ನಡೆದು ಕೊಂಡು ಹೋಗುವಾಗ ನೀರು ಹರಿಯುವ ಶಬ್ಧವನ್ನು ಕೇಳಿ ಒಳಕಾಡು ಅವರಿಗೆ ಕರೆ ಮಾಡಿ ತಿಳಿಸಿದರು.ನಿತ್ಯವು ಇಲ್ಲಿ ಪೋಲಾಗುತ್ತಿರುವ ನೀರಿನ ಪ್ರಮಾಣವು ಲಕ್ಷಕ್ಕೂ ಅಧಿಕ ಲೀಟರ್ ಎಂದು ಅಂದಾಜಿಸಲಾಗಿದೆ. ತಕ್ಷಣ ನಗರಸಭೆ ಅಧಿಕಾರಿಗಳು ಭಾರಿಪ್ರಮಾಣದಲ್ಲಿ ಪೋಲಾಗುತ್ತಿರುವ ಕುಡಿಯುವ ನೀರನ್ನು ರಕ್ಷಿಸಬೇಕಾಗಿದ್ದು, ಕೊಳವೆ ದುರಸ್ತಿಕಾರ್ಯ ನಡೆಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಗ್ರಹಪಡಿಸಿದ್ದಾರೆ.