ಉಡುಪಿ: ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ – ಅರಣ್ಯಾಧಿಕಾರಿ ಮತ್ತು ಅರಣ್ಯ ವೀಕ್ಷಕ ಟ್ರ್ಯಾಪ್

ಬೈಂದೂರು ವಲಯದ ಉಪವಲಯ ಅರಣ್ಯ ಅಧಿಕಾರಿ ಬಂಗಾರಪ್ಪ ಮತ್ತು ಅರಣ್ಯ ವೀಕ್ಷಕ ವಿನಾಯಕ ಲಂಚ ಪಡೆದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಬಂಗಾಪ್ಪನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ವಿನಾಯಕ ನಾಪತ್ತೆಯಾಗಿದ್ದಾರೆ.

ಹಲಸಿನ ಮರವನ್ನು ತೆರವುಗೊಳಿಸಲು ಅನುಮತಿ ನೀಡಲು ಲಂಚ ಕೇಳಿದ ಆರೋಪವಿದ್ದು 4000 ರೂ. ಲಂಚ ಕೇಳಿದ ಆರೋಪದಲ್ಲಿ ಕಾರ್ಯಾಚರಣೆ ನಡೆಸಿ ಟ್ರ್ಯಾಪ್ ಮಾಡಲಾಗಿದೆ. ಮರ ತೆರವು ಮಾಡಲು ಅರ್ಜಿ ಸಲ್ಲಿಸಿದ್ದ ಪಿರ್ಯಾದಿದಾರ ಮಹಮ್ಮದ್ ಅನ್ವರ್ ಹಸನ್ ಬಳಿ ಹಣ ಪಡೆದಿರುವ ಆರೋಪ ಮಾಡಲಾಗಿದೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ನಟರಾಜ್ ಎಂ ಎ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಪ್ರಕಾಶ್ ಕೆ ಸಿ, ಪೊಲೀಸ್ ನಿರೀಕ್ಷಕ ಮಂಜುನಾಥ್ ಭಾಗಿಯಾಗಿದ್ದರು.

Latest Indian news

Popular Stories