ಉಡುಪಿ: ಜು.08ರಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿಲ್ಲ; ಜಿಲ್ಲಾಡಳಿತ ಸ್ಪಷ್ಟನೆ

ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿನ ಶಾಲಾ ಮತ್ತು ಪಿಯು ಕಾಲೇಜುಗಳಿಗೆ ಜುಲೈ 08 ರಂದು ಯಾವುದೇ ರಜೆ ಘೋಷಿಸಿ ಆದೇಶ ಮಾಡಿರುವುದಿಲ್ಲ ಎಂದು ಉಡುಪಿ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿನ ಶಾಲಾ ಮತ್ತು ಪಿಯು ಕಾಲೇಜುಗಳಿಗೆ ಜುಲೈ 08 ರಂದು ರಜೆ ಎಂದು ದುಷ್ಕರ್ಮಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಈ ನಕಲಿ ಸುತ್ತೋಲೆ ಭಾನುವಾರ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಗರಿಕರಲ್ಲಿ ಗೊಂದಲ ಸೃಷ್ಟಿಸಿದೆ.

ಈ ನಕಲಿ ಸುತ್ತೋಲೆಯನ್ನು ಗಮನಿಸಿದ ಉಡುಪಿ ಜಿಲ್ಲಾಡಳಿತವು, ಕುಂದಾಪುರದ ಸಹಾಯಕ ಆಯುಕ್ತರು ಜುಲೈ 08 ಯಾವುದೇ ರಜೆ ಘೋಷಿಸಿ ಆದೇಶ ಮಾಡಿರುವುದಿಲ್ಲ, ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಸ್ಪಷ್ಟನೆ ನೀಡಿದೆ.

Latest Indian news

Popular Stories