ಉಡುಪಿ: ಜಾಹೀರಾತು ಫಲಕಗಳ ಹಳೆಯ ಸ್ಟ್ರಕ್ಚರ್ ತೆರವಿಗೆ ಸೂಚನೆ

ಸಾಂದರ್ಭಿಕ ಚಿತ್ರ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಖಾಸಗಿ ಸ್ಥಳಗಳಲ್ಲಿ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಜಾಹೀರಾತುದಾರರು ಅಳವಡಿಸಿರುವ ಕೆಲವೊಂದು ಜಾಹೀರಾತು ಫಲಕಗಳ ಸ್ಟ್ರಕ್ಚರ್‌ಗಳು ತುಂಬಾ ಹಳೆಯದಾಗಿದ್ದು, ತುಕ್ಕು ಹಿಡಿದಿರುವುದು ಕಂಡು ಬಂದಿರುತ್ತದೆ.

ಗಾಳಿ ಮಳೆಯಿಂದ ಸದರಿ ಸ್ಟ್ರಕ್ಚರ್‌ಗಳು ಬಿದ್ದು ಜೀವಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಎಲ್ಲಾ ಜಾಹೀರಾತುದಾರರು ತಮ್ಮ ತಮ್ಮ ಜಾಹೀರಾತುಗಳಿಗೆ ಅಳವಡಿಸುವ ಸ್ಟ್ರಕ್ಚರ್‌ಗಳನ್ನು ಪರಿಶೀಲಿಸಿ, ಹೊಸದಾಗಿ ಸ್ಟ್ರಕ್ಚರ್‌ಗಳನ್ನು ಅಳವಡಿಸಲು ಸೂಕ್ತ ಕ್ರಮ ವಹಿಸಬೇಕು.
ಈ ಬಗ್ಗೆ ಯಾವುದೇ ಕ್ರಮ ವಹಿಸದೇ ಜೀವಹಾನಿ ಸಂಭವಿಸಿದ್ದಲ್ಲಿ ಸಂಬಂಧಿಸಿದ ಜಾಹೀರಾತುದಾರರೇ ಹೊಣೆಗಾರರಾಗಿರುತ್ತಾರೆ ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Latest Indian news

Popular Stories