ಉಡುಪಿ: ಭಯದ ವಾತಾವರಣ ಸೃಷ್ಟಿಸಿದ ವ್ಯಕ್ತಿಯ ರಕ್ಷಣೆ; ಗುರುತು ಪತ್ತೆಗೆ ಮನವಿ

ಉಡುಪಿ ಜೂ. 20 – ಅಂಬಲಪಾಡಿ ಬಬ್ಬು ಸ್ವಾಮಿ ದೇವಸ್ಥಾನದ ವಠಾರದಲ್ಲಿ ಮನೋರೋಗಿಯೊಬ್ಬ ಕಲ್ಲನ್ನು ಹಿಡಿದು ಸಾರ್ವಜನಿಕರ ಮನೆಗಳಿಗೆ ನುಗ್ಗುತ್ತಾ ಭಯದ ವಾತಾವರಣ ಸೃಷ್ಟಿಸುತ್ತಿದ್ದ ಮಾಹಿತಿ ಪಡೆದ ವಿಶುಶೆಟ್ಟಿ ಅಂಬಲಪಾಡಿಯವರು ಕೂಡಲೇ ಸ್ಥಳಕ್ಕೆ ಬಂದು ಸ್ಥಳೀಯರಾದ ಕೃಷ್ಣ ಹಾಗೂ ಟೆಂಪೊ ಹರೀಶ್ ರವರ ಸಹಾಯದಲ್ಲಿ ವಶಕ್ಕೆ ಪಡೆದು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ವ್ಯಕ್ತಿ ಗಂಗಾಧರ (32) ತುಳು ಕನ್ನಡ, ಓಡಿಸ್ಸಿ ನಿರರ್ಗಳವಾಗಿ ಮಾತನಾಡುತ್ತಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡು ಸಾರ್ವಜನಿಕರಿಗೆ ಹಾಗೂ ದಾರಿಹೊಕರಿಗೆ ಕಲ್ಲಿನಿಂದ ಹಲ್ಲೆಗೆ ಮುಂದಾಗುತ್ತಿದ್ದ. ಮನೆಯೊಂದರ ಮಹಿಳೆ ಕಳ್ಳನೆಂದು ಬ್ರಮಿಸಿ ಕಿರುಚಾಡಿದ್ದಾರೆ. ವಶಕ್ಕೆ ಪಡೆದಾಗ ಮನೋರೋಗಿ ಎಂಬುದಾಗಿ ತಿಳಿದಿದೆ.

ನಗರ ಠಾಣೆಗೆ ಮಾಹಿತಿ ನೀಡಲಾಗಿದ್ದು,ಸಂಬಂಧ ಪಟ್ಟವರು ನಗರ ಠಾಣೆ ಅಥವಾ ಬಾಳೀಗಾ ಆಸ್ಪತ್ರೆ ಸಂಪರ್ಕಿಸುವಂತೆ ವಿಶುಶೆಟ್ಟಿ ತಿಳಿಸಿದ್ದಾರೆ. ಸಂಭಾವ್ಯ ಅನಾಹುತ ತಪ್ಪಿತೆಂದು ಸ್ಥಳೀಯರು ನಿಟ್ಟುಸಿರು ಬಿಟ್ಟು ವಿಶುಶೆಟ್ಟಿಯವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

Latest Indian news

Popular Stories