ಉಡುಪಿ: ಮಾತು ಬಾರದ ವ್ಯಕ್ತಿಯ ರಕ್ಷಣೆ ; ಸೂಚನೆ

ಉಡುಪಿ. ಅ.1 :- ಬ್ರಹ್ಮಾವರ ಪರಿಸರದಲ್ಲಿ‌ ಮೂಗ ವ್ಯಕ್ತಿಯೊಬ್ಬರು ಅಸಹಾಯಕರಾಗಿ ನೆಲೆಗಾಗಿ  ತನ್ನು ಆಡುಬಾಷೆಯಲ್ಲಿ ಯಾಚಿಸುತ್ತಿದ್ದು, ಮಾಹಿತಿ ಪಡೆದ ವಿಶುಶೆಟ್ಟಿಯವರು ರಕ್ಷಿಸಿ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.

 ವ್ಯಕ್ತಿ ಗಣೇಶ್ ಭಟ್(55 ವರ್ಷ) ಮೂಲತಃ ಕುಂದಾಪುರದವರಾಗಿದ್ದು, ನನ್ನ ಸಹೋದರ ತೀರಿಕೊಂಡಿದ್ದು ನಾನು ಅತಂತ್ರನಾಗಿದ್ದೇನೆ. ‌ನೆಲೆ ಇಲ್ಲ ಸಹಕರಿಸಿ ಎಂದು ದುಃಖಿಸುತ್ತ ಸಾರ್ವಜನಿಕ ಸ್ಥಳದಲ್ಲಿ ರೋದಿಸುತ್ತಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಕಾನೂನು ಪಕ್ರಿಯೆ ನಡೆಸಲಾಯಿತು. ಸಂಬಂಧಿಕರು ಇದ್ದಲ್ಲಿ‌ ಹೊಸ ಬೆಳಕು ಆಶ್ರಮವನ್ನು ಸಂಪರ್ಕಿಸಲು ವಿಶುಶೆಟ್ಟಿಯವರು ವಿನಂತಿಸಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಉದ್ಯಾವರ ರಾಮದಾಸ್ ಪಾಲನ್ ಸಹಕರಿಸಿದ್ದರು.

ವೃದ್ಧ ಆತ್ಮಹತ್ಯೆ:


ಉಡುಪಿ, ಅ.2; ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವೃದ್ಧರೊಬ್ಬರು ಯಾರೂ ಇಲ್ಲದ ಸಂದರ್ಭ ನೋಡಿ ಕಿಟಕಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಕ್ಕಿಕಟ್ಟೆ ಇಂದಿರಾನಗರದ 8 ನೇ ತಿರುವಿನಲ್ಲಿ ಮಂಗಳವಾರ ನಡೆದಿದೆ.

 ವೃದ್ಧರನ್ನು ಹೊರ ಜಿಲ್ಲೆಯ 85 ವರ್ಷದ ಭೀಮಪ್ಪ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ನಗರ ಪೋಲಿಸ್ ಠಾಣೆಯ ಶೇಖರ್ ಹೆಡ್ ಕಾನ್ಸ್ಟೇಬಲ್, ಹರೀಶ್ ಮಾಳ ಘಟನಾ ಸ್ಥಳಕ್ಕೆ ಬಂದು ಮಹಜರು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಶವವನ್ನು ಜಿಲ್ಲಾಸ್ಪತ್ರೆಯ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವು ನೀಡಿದರು.

Latest Indian news

Popular Stories