ಉಡುಪಿ: ಹಿರಿಯ ವೈದ್ಯ, ನರರೋಗ ತಜ್ಞರಾದ ಡಾ.ರಾಜಾ ನಿಧನ

ಉಡುಪಿ: ಇಲ್ಲಿನ ಪ್ರಸಿದ್ಧ ಆಸ್ಪತ್ರೆಯಾದ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ, ನರರೋಗ ತಜ್ಞರಾದ ಡಾ.ರಾಜಾ(73) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.

ಇಂದು ಬೆಳಿಗ್ಗೆ ಮಣಿಪಾಲದ ರಾಜೀವ್ ನಗರದ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ
ಅವರನ್ನು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದರೂ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು.

ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತಿಮ ದರ್ಶನ ಇಂದು ಮಧ್ಯಾಹ್ನ 1 ಗಂಟೆಯಿಂದ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಹಾಗೂ 2.30ರಿಂದ ಡಾ.ಎ.ರಾಜಾ ಅವರ ಸ್ವಗೃಹ ಮಣಿಪಾಲದ ರಾಜೀವ ನಗರದಲ್ಲಿ ಜೂ.17 ಸೋಮವಾರ ಬೆಳಿಗ್ಗೆ 10.30ವರೆಗೆ ನಡೆಯಲಿದೆ.

Latest Indian news

Popular Stories