Udupi | ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ; ಆರೋಪದಿಂದ ತಂದೆ ದೋಷಮುಕ್ತ

ಕಾಪು: ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರವೆಸಗಿದ ಆರೋಪದಲ್ಲಿ ಪೋಕ್ಸೋ ಪ್ರಕರಣಕ್ಕೆ ಗುರಿಯಾಗಿದ್ದ ತಂದೆ, ಉಚ್ಚಿಲದ ಭಾಸ್ಕರ ನಗರ ನಿವಾಸಿ ಸೈಯದ್‌ ಮುಸ್ತಕೀಮ್‌ ಅಹ್ಮದ್‌ (39) ನನ್ನು ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.

ಉಚ್ಚಿಲದ ಭಾಸ್ಕರ ನಗರ ನಿವಾಸಿ ಸೈಯದ್‌ ಮುಸ್ತಕೀಮ್‌ ಅಹ್ಮದ್‌ 2019ರ ನ. 30ರಿಂದ ಡಿ. 15ರ ನಡುವಿನ ಅವಧಿಯಲ್ಲಿ ತನ್ನ 7 ಮತ್ತು 14 ವರ್ಷದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರವೆಸಗಿದ್ದಾನೆ ಎಂದು ಆತನ ಪತ್ನಿ ನಫೀಸಾ ನುಸ್ರತ್‌ ಪಡುಬಿದ್ರಿ ಪೊಲೀಸ್‌ ಠಾಣೆಗೆ 2020ರ ಮಾ. 20ರಂದು ದೂರು ನೀಡಿದ್ದಳು. ಈ ಬಗ್ಗೆ ಪೋಕೊÕ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಈ ಬಗ್ಗೆ ಅಂದಿನ ಕಾಪು ಪೊಲೀಸ್‌ ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್‌ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Latest Indian news

Popular Stories