ಉಡುಪಿ: ಅಕ್ರಮವಾಗಿ ಸಾರಾಯಿ ವಶದಲ್ಲಿಟ್ಟುಕೊಂಡ ಆರೋಪಿಗೆ ಒಂದು ವರ್ಷ ಶಿಕ್ಷೆ

ಆರೋಪಿತನಾದ ಮಂಜುನಾಥ್ ಕುಂದರ್, ತಂದೆ-ಕೃಷ್ಣ ಕುಂದರ್ (43 ವರ್ಷ) ಇವರು ದಿನಾಂಕ : 08-12-2020 ರಂದು ಸಂಜೆ ಉಡುಪಿ ತಾಲೂಕು ಬೈರಂಪಳ್ಳಿ ಗ್ರಾಮದ ಕುಂತಾಲುಕಟ್ಟೆ ಎಂಬಲ್ಲಿ ಅಕ್ರಮಾವಾಗಿ ಶೆಡ್‌ನಲ್ಲಿ ಮದ್ಯ ದಾಸ್ತಾನು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

ಈ ಬಗ್ಗೆ ಅಬಕಾರಿ ಉಪನೀರೀಕ್ಷಕರಾದ ಶಿವಶಂಕರ್ ಯು. ಇವರು ಪ್ರಕರಣ ಪತ್ತೆ ಹಚ್ಚಿದ್ದು, ಅಬಕಾರಿ ನಿರೀಕ್ಷಕರಾದ ಜ್ಯೋತಿ.ಎನ್. ಇವರು ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಈ ಪ್ರಕರಣವು ಮಾನ್ಯ ಉಡುಪಿ ಮಾನ್ಯ ಪ್ರಧಾನ ಸಿ.ಜೆ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತನ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶರಾದ ಶ್ರೀಮತಿ ದೀಪಾ ರವರು ಆರೋಪಿತನಾದ ಮಂಜುನಾಥ್ ಕುಂದರ್‌ರವರಿಗೆ ಅಕ್ರಮವಾಗಿ ಸಾರಾಯಿ ದಾಸ್ತಾನು ಮಾಡಿದ್ದರಿಂದ ಅಬಕಾರಿ ಕಾಯ್ದೆ ಕಲಂ 32(1)ರಡಿ 1ವರ್ಷ ಕಠಿಣ ಸಜೆ ಮತ್ತು ರೂ.10000/- ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ 2 ತಿಂಗಳ ಸಾಧಾರಣಾ ಶಿಕ್ಷೆಯನ್ನು ವಿಧಿಸಿ ದಿ: 23-02-2024 ರಂದು ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಹೆಚ್.ಎಂ.ನದಾಫ್ ರವರು ಪ್ರಕರಣ ನಡೆಸಿರುತ್ತಾರೆ.

Latest Indian news

Popular Stories