ಉಡುಪಿ: ಅಂಬಾಗಿಲಿನಲ್ಲಿ ಡಿವೈಡರ್’ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಕಾರು – ಅಪಘಾತದ ರಭಸಕ್ಕೆ ಹಾರಿ ಹೋದ ಇಂಜಿನ್!

ಉಡುಪಿ: ಕಾರೊಂದು ಅತೀ ವೇಗದಿಂದ ಚಲಿಸುತ್ತಿದ್ದಾಗ  ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದು ಕಾರು ಪಲ್ಟಿಯಾದ ಘಟನೆ ಉಡುಪಿ ಅಂಬಾಗಿಲುವಿನಲ್ಲಿ ಜೂನ್ 13ರಂದು ನಡೆದಿದೆ.

ಭಟ್ಕಳದಿಂದ ಮಂಗಳೂರಿನತ್ತ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಭಾಗಗಳೆಲ್ಲಾ ರಸ್ತೆಯೆಲ್ಲಾ ಹರಡಿ ಬಿದ್ದಿದೆ. ಕಾರಿನ ಇಂಜಿನ್ ಮಾರುದ್ದ ಹೋಗಿ ಬಿದ್ದಿದೆ. ಇನ್ನು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

1001240335 1 Udupi, Accident News, Trending News


Latest Indian news

Popular Stories