ಅಧಿಕಾರಿಗಳನ್ನು ಬೆದರಿಸುವ ಕ್ರಿಮಿನಲ್ ಶಾಸಕನಿಗೆ ಹೆದರಲಾರೆವು: ಜಯನ್ ಮಲ್ಪೆ

ಮಲ್ಪೆ: ಸಂಘಪರಿವಾರದ ಕಾನೂನುಬಾಹಿರ ದಂದೆಗಳನ್ನು ಬೆಂಬಲಿಸಲು ಅಧಿಕಾರಿಗಳಿಗೆ ಬೆದರಿಸುವ ಯಶಪಾಲ ಸುವರ್ಣ ಒಬ್ಬ ಕ್ರಿಮಿನಲ್ ಶಾಸಕ. ಅವರಿಗೆ ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗದ ಪರಿಜ್ಞಾನವಿಲ್ಲ. ಇವರ ಗೊಡ್ಡು ಬೆದರಿಕೆಗೆ ನಾವು ಹೆದರಲಾರೆವು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅವರು ತೆಂಕನಿಡಿಯೂರು ಗ್ರಾಮಪಂಚಾಯತಿಯ ವ್ಯಾಪ್ತಿಯಲ್ಲಿ ಅನಧಿಕೃತ ಕೋಳಿ ಅಂಗಡಿಯನ್ನು ತೆರವುಗೊಳಿಸದ ಪಿ.ಡಿ.ಒನನ್ನು ಅಮಾನತು ಮಾಡುವಂತೆ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಹಮ್ಮಿಕೊಂಡ ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಾ,

ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಸದಸ್ಯೆಯೊಬ್ಬಳು ಯಾವುದೇ ಪರವಾಣಿಗೆ ಇಲ್ಲದೆ ನಡೆಸುತ್ತಿರುವ ಕೋಳಿ ಅಂಗಡಿಯನ್ನು ತೆರವುಗೊಳಿಸುದನ್ನು ಬಿಟ್ಟು ಅಧಿಕಾರಿಳಿಗೆ ಬೆದರಿಕೆಯೊಡ್ಡುವ ಕೆಲಸ ಶಾಸಕ ಮಾಡುತ್ತಿರುವುದು ನಾಚಿಕೆಗೇಡು ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೇಸ ಉಪಾಧ್ಯಾಕ್ಷ ಪ್ರಖ್ಯಾತ್‌ಶೆಟ್ಟಿ ಮಾತನಾಡಿ ಸಂಪೂರ್ಣ ಬೆಂಬಲವಿಲ್ಲದ ತೆಂಕನಿಡಿಯೂರು ಗ್ರಾಮಪಂವಾಯತ್ ಜನವಿರೋಧಿ ಕೆಲಸಮಾಡುತ್ತಿರುವುದು ಸಂವಿಧಾನಕ್ಕೆ ಬಗೆದ ಅಪಚಾರ ನ್ಯಾಯಬದ್ಧ ಬೇಡಿಕೆಗೆ ತಕ್ಷಣ ಸ್ಪಂದಿಸದಿದ್ದಲ್ಲಿ ಮುಂದೆ ಇನ್ನಷ್ಟು ಹೋರಾಟವನ್ನು ಎದುರಿಸಬೇಕಾದಿತು ಎಂದರು.

ದಸಂಸ ಜಿಲ್ಲಾ ಸಂಚಾಲಕ ಶೇಖರ ಹೆಜಮಾಡಿ ಮಾತನಾಡಿ ಪಂಚಾಯತ್ ರಾಜ್ ಕಾಯ್ದೆಯನ್ನು ಸರಿಯಾಗಿ ಅಥೈಸಿಕೊಳ್ಳದ ಅಧಿಕಾರಿ ತನ್ನ ಮಾನಕಾಡಲು ಇನ್ನಾದರೂ ಅನಧಿಕೃತ ಕೋಳಿ ಅಂಗಡಿಯನ್ನು ತೆರವುಗೊಳಿಸದೇ ಹೋದರೆ ಮುಂದೆ ಜಿಲ್ಲೆಗೆ ಬರುವ ಎಲ್ಲಾ ಸಚಿವರಿಗೆ ಕರಿಪತಾಕೆ ಪ್ರದರ್ಶಿಸುದಾಗಿ ಎಚ್ಚರಿಸಿದರು.

ಪ್ರಗತಿಪರ ಚಿಂತಕ ಸಂಜೀವ ಬಲ್ಕೂರು ಪ್ರತಿಭಟನಾಗಾರರನ್ನು ಉದ್ದೇಶಿಸಿ ಸಾರ್ವಜನಿಕರ ಆಕ್ಷೇಪವಿರುವ ಮತ್ತು ಪರಿಸರಕ್ಕೆ ಬಾರೀ ಅನಾಹುತ ಉಂಟುಮಾಡುವ ಅನಧಿಕೃತ ಕೋಳಿ ಫಾರ್ಮ್‌ನ್ನು ತಕ್ಷಣ ಮುಚ್ಚಿ ಇಲ್ಲ ತಮ್ಮ ಕುರ್ಚಿ ಖಾಲಿ ಮಾಡಿ ಜನರಿಗೆ ನೆಮ್ಮದಿಯ ಆಡಳಿತ ನೀಡಲು ಸಹಕರಿಸಿ ಎಂದರು.

ಕಾಂಗ್ರೇಸ್‌ನ ಹಿರಿಯ ನಾಯಕ ಮಹಾಬಲ ಕುಂದರ್ ಮಾತನಾಡಿ ಇಲ್ಲಿನ ಜನಪ್ರತಿನಿಧಿಗಳಿಗೆ ಪಂಚಾಯತ್ ರಾಜ್ ಕಾಯ್ದೆಗೊತ್ತಿಲ್ಲ. ದಲಿತರ ಮೀಸಲು ಕ್ಷೇತ್ರದಲ್ಲಿ ಇಂತಹ ಪರಿಸರ ಮಾಲೀನ್ಯದ ಅಂಗಡಿಯನ್ನು ತೆರೆಯುವುದು ದಲಿತ ದೌರ್ಜನ್ಯ ಕಾಯ್ದೆಯಡಿ ಅಪರಾದ.ಕೇವಲ ಅವಿವೇಕೆ ಜನಪ್ರತಿನಿಧಿಗಳ ಮಾತು ಕೇಳಿ ಪಿ.ಡಿ,ಒ.ದಾರಿ ತಪ್ಪಿದ್ದಾರೆ.ಮುಂದೆ ಬಾರೀ ಅನಾಹುತಕ್ಕೆ ಅವಕಾಶ ಕೊಡದೆ ಕೂಡಲೇ ಅನಧಿಕೃತ ಕೋಳಿ ಅಂಗಡಿಯನ್ನು ತೆರವುಗೊಳಿಸಿ ಎಂದರು.

ದಲಿತ ಮುಖಂಡ ಉಮಾನಾಥ ಪಡುಬಿದ್ರಿ ಮಾತನಾಡಿ ದಲಿತರ ಸ್ವಾಭಿಮಾನಕ್ಕೆ ಅಡ್ಡಿಮಾಡುವ ತೆಂಕನಿಡಿಯೂರು ಗ್ರಾಮಪಂಚಾಯತಿಯ ನಿರ್ಣಯ ಸಂವಿಧಾನ ವಿರೋಧಿ ಮತ್ತು ಅಧಿಕಾರಿಗಳು ಮುಂಡ ರಾಜಕೀಯ ಜನಪ್ರತಿನಿಧಿಗಳ ಹಸ್ತಕ್ಷೇಪಕ್ಕೆ ಒಳಗಾಗುವುದು ಕಾನೂನುಬಾಹಿರ.ಶೂಷೀತರ ಹಕ್ಕನ್ನು ಮೊಟಕುಗೊಳಿಸುವ ಪಂಚಾಯತ್ ನಿರ್ಧಾರದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರಹೋರಾಡ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಧರಣಿಯಲ್ಲಿ ಕಾಂಗ್ರೇಸ್‌ನ ಕೀರ್ತಿ ಶೆಟ್ಟಿ ಅಂಬಲಪಾಡಿ,ಹವದ್,ಆನಂದ ಪೂಜಾರಿ,ಉಪೇಂದ್ರ,ಗ್ರಾಮ ಪಂಚಾಯತಿ ಸದಸ್ಯರಾದ ರವಿರಾಜ್ ಲಕ್ಷ್ಮೀನಗರ,ವೆಂಕಟೇಶ್ ಕುಲಾಲ್,ಪ್ರಧ್ವೀರಾಜ್ ಶೆಟ್ಟಿ,ಸತೀಶ್ ನಾಯ್ಕ, ಮಂಜುನಾಥ,ಮಾಜಿ.ತಾ,ಪಂ,ಸದಸ್ಯ ಧನಂಜಯ.

ದಲಿತ ಮುಖಂಡರಾದ ಹರೀಶ್ ಸಲ್ಯಾನ್,ಗಣೇಶ್ ನೆರ್ಗಿ,ಆನಂದ ಬ್ರಹ್ಮಾವರ,ಸುಕೇಶ್ ಪುತ್ತೂರು,ಸುಶೀಲ್ ಕುಮಾರ್ ಕೊಡವೂರು,ಸಾಧು ಚಿಪ್ಪಾಡಿ,ನವೀನ್ ಬನ್ನಂಜೆ,ಗುಣವಂತ ತೊಟ್ಟಂ,ಅಶೋಕ್ ನಿಟ್ಟೂರು, ಮುಂತಾದವರು ಭಾಗವಹಿಸಿದ್ದರು.

ಧರಣಿ ನಿರತರಬಳಿ ಉಡುಪಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಣಧಿಕಾರಿ ಶ್ರೀಮತಿ ವಿಜಯ ನಾಯ್ಕ ಮತ್ತು ತಾಹಿಶೀಲ್ದಾರರ ಪರವಾಗಿ ಕಂದಾಯ ಆಧಿಕಾರಿ ಗಿರೀಶ್‌ರವರು ಮನವಿ ಸ್ವೀಕರಿಸಿ,ಸೂಕ್ತ ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಪ್ರಶಾಂತ್ ಬಿ.ಎನ್ ಸ್ವಾಗತಿಸಿ,ಕೃಷ್ಣ ಶ್ರೀಯಾನ್ ವಂದಿಸಿದರು

Latest Indian news

Popular Stories