ಲೋಕಸಭಾ ಬಿಜೆಪಿ ಟಿಕೆಟ್ ವಂಚಿತ ಪ್ರಮೋದ್ ಮಧ್ವರಾಜ್ ಹೇಳಿದ್ದೇನು?

ಲೋಕಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಪ್ರಮೋದ್ ಮಧ್ವರಾಜ್ ಅವರು ಇದೀಗ ಹೇಳಿಕೆ ನೀಡಿ ಇವತ್ತಿನ ದಿನ ಭಾರತೀಯ ಜನತಾ ಪಕ್ಷ ಉಡುಪಿ – ಚಿಕ್ಕಮಗಳೂರು ಕ್ಷೇತ್ರಕ್ಕೆ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರನ್ನ ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.ಈ ದೇಶಕ್ಕೆ ಇನ್ನೊಮ್ಮೆ ಮೋದಿಯವರನ್ನು ಪ್ರಧಾನಮಂತ್ರಿ ಆಗ್ಬೇಕು,ಇನ್ನೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬತಕ್ಕಂತಹ ನಿರೀಕ್ಷೆಯಂತೆ ನಾವೆಲ್ಲರೂ ಸೇರಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಶ್ರಮವಹಿಸಬೇಕಾಗಿದೆ ಎಂದಿದ್ದಾರೆ.

ನಾನು ಪಕ್ಷದ ನಿರ್ದೇಶನದಂತೆ ಮುಂದೆ ಯಾವ ರೀತಿಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬುದಾಗಿ ನಿರ್ದಾರವನ್ನ ತೆಗೆದುಕೊಳ್ಳುತ್ತೇನೆ, ನನ್ನ ಪರವಾಗಿ ಯಾರೆಲ್ಲ ನನ್ನ ಹಿತೈಷಿಗಳು , ಬೆಂಬಲಿಗರು ನಮ್ಮ ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳು ನನ್ನ ಪರವಾಗಿ ನನಗೆ ಟಿಕೇಟ್ ನೀಡಬೇಕು ಎಂದು ನನ್ನ ಜೊತೆ ನಿಂತವರೆಲ್ಲರಿಗೂ ನಾನು ವಿಶೇಷವಾದ ಧನ್ಯವಾದವನ್ನ ಅರ್ಪಣೆ ಮಾಡುತ್ತಿದ್ದೇನೆ.

ಮುಂದಿನ ದಿನಗಳಲ್ಲಿ ಈ ಭವ್ಯವಾದ ದೇಶವನ್ನು ಕಟ್ಟುವಲ್ಲಿ ನಾವೆಲ್ಲರೂ ಶ್ರಮವಹಿಸೋಣ ಎನ್ನುವ ಮಾತನ್ನ ತಿಳಿಸುತ್ತಾ ಎಲ್ಲರಿಗೂ ಶುಭಕೋರುತ್ತೇನೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

Latest Indian news

Popular Stories