ವಿಸ್ಡಮ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬುಡೋಳಿ-ಗಡಿಯಾರ ಇದರ ಮಂತ್ರಿಮಂಡಲ ರಚನೆ, ಪದಗ್ರಹಣ

ಆ. 12, ವಿಟ್ಲ. ಇಲ್ಲಿನ ಬುಡೋಳಿ ಸಮೀಪದ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿರುವ ಪ್ರತಿಷ್ಠಿತ ವಿಸ್ಡಮ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಮಂತ್ರಿ ಮಂಡಲದ ರಚನೆ ಹಾಗೂ ಪದಗ್ರಹಣ ಕಾರ್ಯಕ್ರಮ ಶಾಲೆಯ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

IMG 20240813 WA0017 Udupi

ಈ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ವಿಟ್ಲ ಪೊಲೀಸ್ ಠಾಣೆಯ ಸಹಾಯಕ ಆರಕ್ಷಕ ಉಪನಿರೀಕ್ಷಕ ತಿಮ್ಮಯ್ಯ ಅವರು ವಿದ್ಯಾರ್ಥಿಗಳಿಗೆ ಬ್ಯಾಜ್ ವಿತರಿಸಿ, ವಿದ್ಯಾರ್ಥಿಗಳು ಮುಂದೆ, ದೇಶದ ಪ್ರಜ್ಞಾವಂತ ನಾಗರಿಕರಾಗಿ ಬೆಳೆಯುವಲ್ಲಿ ತಮ್ಮ ಹೊಣೆಗಾರಿಕೆಗಳ ಬಗ್ಗೆ ತಿಳಿ ಹೇಳಿದರು.

IMG 20240813 WA0018 Udupi

ನಂತರ ಮಾತನಾಡಿದ
ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಮನೋಜ್ ಕುಮಾರ್ ರವರು, ನಾವು ಯಾವ ರೀತಿಯಲ್ಲಿ, ರಸ್ತೆ ಸುರಕ್ಷತಾ ನಿಯಮಗಳನ್ನು, ಪಾಲಿಸಬೇಕಾಗಿದೆ ಎಂಬುವುದರ ಕುರಿತು, ಮೋಟಾರು ವಾಹನ ಕಾಯ್ದೆಯ ನಿಯಮಾವಳಿಗಳ ಬಗ್ಗೆ ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮಗಳು ಹಾಗೂ ಪೋಕ್ಸೊ ಕಾಯ್ದೆ ಸಂಬಂಧಿಸಿದಂತೆ, ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

IMG 20240813 WA0019 1 Udupi

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಅಬೂಬಕರ್ ಅನಿಲಕಟ್ಟೆರವರು ಪುಸ್ತಕಗಳನ್ನು ಓದಿ ಜ್ಞಾನವನ್ನು ವೃಧ್ದಿಸುವುದರ ಜೊತೆಗೆ ಸಾಹಿತ್ಯಾಸಕ್ತಿಯನ್ನು ಬೆಳೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆವಹಿಸಿದ್ದ, ಸಂಸ್ಥೆಯ ಸಂಚಾಲಕ ಅಬ್ದುಲ್ ಖಾದರ್ ಕು ಕ್ಕಾಜೆಯವರು, ವಿಜೇತ ಪ್ರತಿನಿಧಿಗಳನ್ನು ಅಭಿನಂದಿಸಿ, ತಮ್ಮ ಜವಾಬ್ದಾರಿಯುತ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸುವ ಬಗ್ಗೆ ಅರಿವು ನೀಡಿದರು. ಹಾಗೂ ಮುಖ್ಯೋಪಾಧ್ಯಾಯರಾದ, ಇಬ್ರಾಹೀಮ್ ಒ. ಪ್ರತಿಜ್ಞಾ ವಿಧಿ ಭೋದಿಸಿದರಲ್ಲದೆ ಕೊನೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮವನ್ನು , ಶಿಕ್ಷಕಿ ಶ್ರೀಮತಿ ಮುಬೀನಾರವರು ಅತಿಥಿಗಳನ್ನು ಸ್ವಾಗತಿಸಿದರು, ಶಿಕ್ಷಕಿ ಶ್ರೀಮತಿ ಸಿನಾನರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಕೊನೆಯಲ್ಲಿ ಶಿಕ್ಷಕಿ ಕುಮಾರಿ ಸ್ವಾತಿಯವರು ಧನ್ಯವಾದವಿತ್ತರು.

Latest Indian news

Popular Stories