ಈಶ್ವರಪ್ಪ ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯಬಾರದು : ಶಾಸಕ ಶಿವರಾಮ ಹೆಬ್ಬಾರ್ ರಿಂದ ಈಶ್ವರಪ್ಪಗೆ ಟಾಂಗ್

ಕಾರವಾರ : ಮಾಜಿ ಸಚಿವ ಕೆ.ಎಸ್ .ಈಶ್ವರಪ್ಪ ಗಾಜಿನ ಮನೆಯಲ್ಲಿ ಕುಳಿತು ನನ್ನತ್ತ ಕಲ್ಲೆಸೆಯಬಾರದು ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಗೆ ಟಾಂಗ್ ಕೊಟ್ಟಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಮಗೆ ಹಣ ಕೊಟ್ಟಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಶಿರಸಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಬೇರೆ ಬೇರೆ ರಾಜ್ಯದಲ್ಲಿ ಬಿಜೆಪಿಯವರೆ ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡಿದ್ದಾರಲ್ಲ ಅವರಿಗೆಲ್ಲಾ ಎಷ್ಟೆಷ್ಟು ಕೋಟಿ ಹಣ ನೀಡಿದ್ದಾರೆಂಬುದನ್ನು ಕೆ.ಎಸ್. ಈಶ್ವರಪ್ಪ ಬಹಿರಂಗ ಪಡಿಸಲಿ ಎಂದು ಹೆಬ್ಬಾರ್ ತಿರುಗೇಟು ನೀಡಿದರು.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಕೆಲ ಹಾಗೂ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಆರು ಜನ
ಕಾಂಗ್ರೆಸ್ ಶಾಸಕರು ಬಿಜೆಪಿಯ ರಾಜ್ಯಸಭಾ ಸದಸ್ಯರಿಗೆ ಕ್ರಾಸ್ ಓಟಿಂಗ್ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಶಾಸಕರಿಗೆ ಎಷ್ಟು ಹಣವನ್ನು ಬಿಜೆಪಿಯವರು ಕೊಟ್ಟಿದ್ದಾರೆ ಎನ್ನುವುದನ್ನು ನಾನು ಕೇಳಬೇಕಾಗುತ್ತದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಕೆಲ ಶಾಸಕರು ಅಡ್ಡಮತದಾನ ಮಾಡಿದರಲ್ಲಾ , ಅಲ್ಲಿ ಬಿಜೆಪಿಯವರು ಎಷ್ಟೆಷ್ಟು ಇನ್ವೆಸ್ಟಮೆಂಟ್ ಮಾಡಿದ್ದಾರಂತೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಲಿ.

ಮಾಜಿ ಸಚಿವ ಈಶ್ವರಪ್ಪನ ಮಾತನ್ನು ಬಿಜೆಪಿಯಲ್ಲೇ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರ ಮಾತಿಗೆ ಬೆಲೆಯಿಲ್ಲದಂತಾಗಿದೆ. ಈ ಹಿಂದೆ ಇದೆ ಈಶ್ವರಪ್ಪ ಏನೆಲ್ಲಾ ಮಾಡಿಕೊಂಡು ರಾಜೀನಾಮೆ ಕೊಡಬೇಕಾಗಿ ಬಂತು ಎನ್ನುವುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತು, ಈಶ್ವರಪ್ಪನವರಿಗೂ ಗೊತ್ತಿದೆ.ರಾಜ್ಯದಲ್ಲಿ
ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸಿ , ಯಡಿಯೂರಪ್ಪ ನವರ ಬಿಜೆಪಿ ಸರ್ಕಾರ ತರುವಾಗ ಈಶ್ವರಪ್ಪ ನಮಗೆ ಎಷ್ಟು ಕೋಟಿ ಹಣ ಕೊಟ್ಟಿದ್ದರು ಅಂತಾ ಹೇಳಬೇಕು.
ಮಾತನಾಡಲು ಬರುತ್ತದೆ ಅಂತಾ ಏನಾದ್ರೂ ಮಾತನಾಡಬಾರದು .ಈಶ್ವರಪ್ಪ ಗಾಜಿನ ಮನೆಯಲ್ಲಿದ್ದುಕೊಂಡು ಕಲ್ಲು ಹೊಡೆಯುವಾಗ ತಾವು ಗಾಜಿನ ಮನೆಯಲ್ಲಿದ್ದೇವೆ ಎಂದು ಎಚ್ಚರಿಕೆ ವಹಿಸಬೇಕಿರುವುದು ಅವರ ಹಿರಿತನಕ್ಕೆ ಒಳ್ಳೆಯದು ಎಂದು ಶಾಸಕ ಶಿವರಾಮ ಹೆಬ್ಬಾರ್ ವಾಗ್ದಾಳಿ ಮಾಡಿದರು.

Latest Indian news

Popular Stories