ಉ.ಕ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 5.28 ಲಕ್ಷ ರೂ.ವಶಕ್ಕೆ

ಕಾರವಾರ : ಶಿರಸಿ ಫ್ಲಾಯಿಂಗ್ ಸ್ವಾಡ್ ತಂಡದ ಅಧಿಕಾರಿ ಪಿಆರ್ ಇಡಿ ಸಹಾಯಕ ಅಭಿಯಂತರ ರಂಗಪ್ಪ ನೇತೃತ್ವದ ತಂಡ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಿರಸಿ ತಾಲೂಕಿನ ತಿಗಣಿ ಚೆಕ್ ಪೋಸ್ಟನಲ್ಲಿ ಮಂಗಳವಾರ ಮಧ್ಯಾಹ್ನ 1-30 ರ ಸಮಯಕ್ಕೆ ಬಸ್ ನಲ್ಲಿ ತಪಾಸಣೆ ಮಾಡುವಾಗ ಬೆಳಗಾವಿ ಅಥಣಿಯ ಸಂಕೋನಾ ನಿವಾಸಿ
ಪರಶುರಾಮ ಯಲ್ಲಪ್ಪ ಪ್ರಯಾಣಿಸುತ್ತಿದ್ದ (ವಾಹನ ಸಂಖ್ಯೆ ಕೆಎ -36 ಪಿ- 3357) ದಿಂದ 5.28 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ. ಯಾವುದೇ ದಾಖಲೆಗಳು ಹಣಕ್ಕೆ ಇರಲಿಲ್ಲ.

ವಾಹನವು ಶಿರಸಿಯಿಂದ ಹಿರೆಕೇರೂರಗೆ ಹೋಗುವ ಸಮಯದಲ್ಲಿ ವಾಹನವನ್ನು ಕರ್ತವ್ಯ ನಿರತ ಎಸ್.ಎಸ್.ಎ. ತಂಡದವರು ಮತ್ತು ಪೊಲೀಸ್ ಸಿಬ್ಬಂದಿಗಳು ತಪಾಸಣೆ ಮಾಡಿದಾಗ 5.28.000. 00 ( ಐದು ಲಕ್ಷ ಇಪ್ಪತ್ತೆಂಟು ಸಾವಿರ ರೂಪಾಯಿ) ಗಳನ್ನು ಯಾವುದೇ ದಾಖಲೆಗಳಿಲ್ಲದ ನಗದು ದೊರಕಿತು. ಅಧಿಕೃತ ದಾಖಲೆಗಳು ವಾಹನ ಪರಿಶೀಲನೆ ಮಾಡುವಾಗ ಲಭ್ಯವಿಲ್ಲದ ಕಾರಣ ನಿಯಮಾನುಸಾರ ಹಣವನ್ನು ಮುಟ್ಟುಗೋಲು ಹಾಕಿಕೊಂಡು, ಶಿರಸಿಯ ಉಪ ಖಜಾನೆಯಲ್ಲಿ ಇರಿಸಲಾಗಿದೆ .

ಮತ್ತೊಂದು ಪ್ರಕರಣದಲ್ಲಿ
ದಾಖಲೆ ಇಲ್ಲದೆ ಕಾರ್ ನಲ್ಲಿ ಸಾಗಿಸಲಾಗುತ್ತಿದ್ದ 1.50 ಲಕ್ಷ ರೂ.ಗಳನ್ನು ತಿಗಣಿ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ವಶಪಡಿಸಿಕೊಳ್ಳಲಾಗಿದೆ. ಶಿರಸಿ ಉಪ ಖಜಾನೆಯಲ್ಲಿ ವಶಪಡಿಸಿಕೊಂಡ ಹಣ ಇಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಯಲ್ಲಾಪುರ ವಿಭಾಗದ ಸಹಾಯಕ ಚುನಾವಣಾ ಅಧಿಕಾರಿ ಅಜ್ಜಪ್ಪ ಸೊಗಲದ ತಿಳಿಸಿದ್ದಾರೆ.

Latest Indian news

Popular Stories