ಉ.ಕ : ಉಚಿತ ಕಾನೂನು ಸಲಹೆ ಮತ್ತು ಜನತಾ ನ್ಯಾಯಾಲಯ ಕಾರ್ಯ ಯಶಸ್ವಿ

ಕಾರವಾರ : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಹಾಗೂ ದಾಂಡೇಲಿ ತಾಲ್ಲೂಕಾ ಕಾನೂನು ಸೇವಾ ಘಟಕದ ವತಿಯಿಂದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಯೋಜಿಸಿದ ಕಾರ್ಯಕ್ರಮದಲ್ಲಿ ಸ್ಥಳೀಯ ನ್ಯಾಯಾಧೀಶೆ ರೋಹಿಣಿ ಬಸಾಪೂರ ಅವರ ಮಾರ್ಗದರ್ಶನದಲ್ಲಿ ಉಚಿತ ಕಾನೂನು ಸೇವಾ ಮಳಿಗೆಯೊಂದನ್ನು ತೆರೆದು ಸಾರ್ವಜನಿಕರಿಗೆ ಉಚಿತ ಕಾನೂನು ಸಲಹೆ ನೀಡಲಾಯಿತು. ಜನತಾ ನ್ಯಾಯಾಲಯ ಎಂಬ ವಿನೂತನ ಕಾರ್ಯಕ್ರಮ ಇದಾಗಿತ್ತು.

22 ವಿಷಯಗಳಲ್ಲಿ ಕಾನೂನು ಸಲಹೆಯ ಬ್ರೌಷರ್ ಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಲಾಯಿತು.

ಸತತ ಮೂರು ದಿನಗಳ ಕಾಲ ಜರುಗಿದ ಈ ಮಳಿಗೆಯ ಮೂಲಕ ವಿದ್ಯಾರ್ಥಿಗಳಿಗೆ ಕಾನೂನಿಗೆ ಪ್ರಾಥಮಿಕ ಜ್ಞಾನ, ಮಹಿಳೆಯರಿಗೆ ಸ್ತ್ರೀಯರ ರಕ್ಷಣೆ, ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತ ಮಾಹಿತಿಯನ್ನು ನೀಡಲಾಯಿತು. ಸಾರ್ವಜನಿಕರಿಗೆ ಉಚಿತ ಕಾನೂನು ನೆರವು ಸಮಿತಿಯ ಪ್ರಯೋಜನಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ದಾಂಡೇಲಿ ವಕೀಲರಾದ ರಾಘವೇಂದ್ರ ವಿ. ಗಡೆಪ್ಪನವರ, ವಕೀಲೆ ಶ್ರೀಮತಿ ಜಯಾ ಡಿ.ನಾಯ್ಕ ನಿರ್ವಹಿಸಿದರು. ಕಾನೂನು ಸೇವಾ ಸಮಿತಿಯ ಸಿಬ್ಬಂದಿ ರಾಹುಲ ಮಡಿವಾಳ, ಮಹೇಶ ಮಾಯಣ್ಣವರ ಸಹಕರಿಸಿದರು.
………

Latest Indian news

Popular Stories