ಬೈಕ್ ಮೇಲೆ ಬಿದ್ದ ಮರ : ಬೈಕ್ ಸವಾರ ಕಾಲಿಗೆ ಪೆಟ್ಟು

ಕಾರವಾರ : ಹೊನ್ನಾವರದ ನಗರಬಸ್ತಿಕೇರಿಯ ಬಳಿ ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ದಂಪತಿ ಮೇಲೆ ಬೃಹತ್ ಮರ ಬಿದ್ದ ಘಟನೆ ಇಂದು ನಡೆದಿದೆ.

ಅತೀಯಾದ ಮಳೆ ಕಾರಣ ರಸ್ತೆಯ ಅಂಚಿನಲ್ಲಿದ್ದ ಮರ ಬೈಕ್ ಮೇಲೆ ಬಿದ್ದಿದೆ.

ಗಾಯಗೊಂಡ ಬೈಕ್ ಸವಾರರನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಬೈಕ್ ಸವಾರ ಗಾಯಗೊಂಡರೆ , ಆತನ ಜೊತೆಗಿದ್ದ ಪತ್ನಿ ಅಪಾಯದಿಂದ ಪಾರಾಗಿದ್ದಾರೆ.

ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿಯ ಗೋಡೆ ಕುಸಿದು ವೃದ್ಧೆ ಸಾವು

ಕಾರವಾರ: ನಿನ್ನೆ ಸುರಿದ ಭಾರೀ ಮಳೆಗೆ ವೃದ್ದೆ ಬಲಿಯಾದ ಘಟನೆ ಅರವಾ ಗ್ರಾಮದ ಥೋರ್ಲೆಭಾಗ ಎಂಬಲ್ಲಿ ನಡೆದಿದೆ.


ರುಕ್ಮಾ ಯಾನೆ ಗುಲಾಬಿ ಮಾಳ್ಸೇಕರ್ (70) ಎಂಬ ಮಹಿಳೆ ಮಳೆ ಬರುವಾಗ ಹಳೆಯ ಅಂಗಡಿ ಬಳಿ ನಿಂತಿದ್ದ ವೇಳೆ ಮಣ್ಣಿನ ಗೋಡೆ ಕುಸಿದು ವೃದ್ಧೆಯ ಮೇಲೆ ಬಿದ್ದಿದೆ. ವೃದ್ಧೆ ಮನೆ ಯಿಂದ ಹೊರ ಹೋದಾಕೆ, ಮಳೆ ಕಾರಣ ಅಂಗಡಿ ಬಳಿ ರಕ್ಷಣೆ ಪಡೆದಿದ್ದರಂತೆ. ಈ ದುರ್ಘಟನೆ ನಡೆದಾಗ ಅಂಗಡಿಯಲ್ಲಿ ಯಾರೂ ಸಹ ಇರಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ತಹಶಿಲ್ದಾರ ನರೋನಾ, ಚಿತ್ತಾಕುಲ ಪೊಲೀಸರು ಭೇಟಿ‌ ನೀಡಿದ್ದಾರೆ. ಭಾರೀ ಮಳೆಯಿಂದ ಗೋಡೆ ಕುಸಿದ ಕಾರಣ ವೃದ್ಧೆ ಸಾವು ಎಂದು ಪ್ರಕರಣ ದಾಖಲಾಗಿದೆ. ಈ ವರ್ಷದ ಮಳೆಗೆ ಮೊದಲ ಬಲಿ ಕಾರವಾರ ತಾಲೂಕಿನ ಅರವಾ ಗ್ರಾಮದಲ್ಲಿ ನಡೆದಂತಾಗಿದೆ.

Latest Indian news

Popular Stories