ಬಿಜೆಪಿ ಕೋಮುವಾದದ ವಿರುದ್ಧ ಆಮ್ ಆದ್ಮಿ ಪಕ್ಷ ಹೋರಾಡಲಿದೆ : ಸಂವಿಧಾನ ವಿರೋಧಿಗಳಿಗೆ ಚುನಾವಣೆಯಲ್ಲಿ ಪಾಠ ಕಲಿಸಿ – ಮುಖ್ಯಮಂತ್ರಿ ಚಂದ್ರು

ಕಾರವಾರ : ಬಿಜೆಪಿ ಕೋಮುವಾದದ ವಿರುದ್ಧ ಆಮ್ ಆದ್ಮಿ ಪಕ್ಷ ಹೋರಾಡಲಿದೆ ಹಾಗೂ ಸಂವಿಧಾನ ವಿರೋಧಿಗಳಿಗೆ ಚುನಾವಣೆಯಲ್ಲಿ ಜನತೆ ಪಾಠ ಕಲಿಸಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು‌.
ಕಾರವಾರದ ಪತ್ರಿಕಾಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾವು ಕೋಮುವಾದಿ, ಸರ್ವಾಧಿಕಾರಿ ಪಕ್ಷದ ವಿರುದ್ಧ ನಾವಿದ್ದೇವೆ . ಬಿಜೆಪಿ ಮತ್ತು ಅದರ ನಡೆಯ ವಿರುದ್ಧ ಕೆಲಸ ಮಾಡ್ತೇವೆ ಎಂದರು.

ಬಿಜೆಪಿ ವಿರುದ್ಧದ ಘಟಬಂಧನದಲ್ಲಿ ನಾವು ಇದ್ದೇವೆ ಎಂದು ಎಂದು ಹೇಳಿದರು. ಕಾಂಗ್ರೆಸ್ ಪಕ್ಷದವರು ಪ್ರಚಾರಕ್ಕೆ ಕರೆದರೆ ಹೋಗುತ್ತೇವೆ. ಸೈದ್ಧಾಂತಿಕ ಗುರಿ ನಮ್ಮದು , ಕಾಂಗ್ರೆಸ ಪಕ್ಷದ್ದು ಒಂದೇ ಇದೆ. ಹಾಗಾಗಿ ನಾವು ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಗೆ ಜೊತೆಯಾಗುವೆವು ಎಂದರು.
ನಾವು ಕರ್ನಾಟಕದಲ್ಲಿ ಎರಡು ಕ್ಷೇತ್ರ ಕೇಳಿದ್ದೆವು‌ .ಪಂಜಾಬ್ ನಲ್ಲಿ ಹೆಚ್ಚು ಸ್ಥಾನವನ್ನು ಕಾಂಗ್ರೆಸ್ ನವರು ಬಿಟ್ಟು ಕೊಟ್ಟ ಕಾರಣ, ನಾವು ಕರ್ನಾಟಕದಲ್ಲಿ ಲೋಕಸಭಾ ಸ್ಥಾನ ಕೇಳಿಲ್ಲ‌ ಎಂದರು‌ ‌ .
ಇಲ್ಲಿಯ ಸಂಸದ ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಿಸುವ ಎಂದಿದ್ದು ಅವರ ಮೇಲೆ ಬಿಜೆಪಿ ಕ್ರಮ ಕೈಗೊಂಡಿಲ್ಲ. ಅವರಿಗೆ ಟಿಕೆಟ್ ಕೊಟ್ಟರೆ ಅವರ ಸಂವಿಧಾನ ಬದಲಾವಣೆ ಹೇಳಿಕೆಗೆ ಮೋದಿ, ಅಮಿತ್ ಶಾ ಸಮ್ಮತಿಯಿದೆ ಎಂದಾಯಿತು. ಹಾಗಾಗಿ ಬಿಜೆಪಿ ಗೆದ್ದರೆ ಮುಂದೆ ದೇಶದಲ್ಲಿ ಚುನಾವಣೆ ನಡೆಯಲ್ಲ. ಸರ್ವಾಧಿಕಾರ ಇರುತ್ತದೆ ಎಂದರು‌ .ಆಮ್ ಆದ್ಮಿ ಪಕ್ಷ ದೆಹಲಿ ಮತ್ತು ಪಂಜಾಬ್ ನಲ್ಲಿ ಜನ ಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ನೀಡಿ ಅಧಿಕಾರಕ್ಕೆ ಬಂತು. ಕರ್ನಾಟಕದಲ್ಲಿ ಕಾಂಗ್ರೆಸ್ ಆಮ್ ಆದ್ಮಿ ಪಕ್ಷದ ಮಾದರಿಯನ್ನು ಕಾಪಿ ಮಾಡಿತು‌ ‌ ಹಾಗಾಗಿ ಇವರು ಅಧಿಕಾರಕ್ಕೆ ಬಂದರು. ಭ್ರಷ್ಟಾಚಾರ ರಹಿತ ಸರ್ಕಾರ ನೀಡಿದ್ದು ಕೇಜ್ರಿವಾಲ್‌ . ಜನರ ತೆರಿಗೆ ಸರಿಯಾಗಿ ಬಳಸಿದರೆ ,ಬಡವರಿಗೆ ಎಲ್ಲಾ ಉಚಿತವಾಗು ನೀಡಬಹುದು ಎಂದು ದೇಶಕ್ಕೆ ತೋರಿಸಿದ್ದು ಆಮ್ ಆದ್ಮಿ ಪಕ್ಷ ‌ .ಹಾಗಾಗಿ ಬಿಜೆಪಿ ಆಮ್ ಆದ್ಮಿ ಯನ್ನು ವಿರೋಧಿಸುತ್ತದೆ ಎಂದರು.

ಬಾಂಡ್ ಸಂಗ್ರಹ ಮೂಲಕ ಬಿಜೆಪಿ ಭ್ರಷ್ಟಾಚಾರದ ಹಣ ಸಂಗ್ರಹಿಸಿತು‌ .ಐಟಿ , ಈಡಿ ಬಿಟ್ಟು ಉದ್ಯೋಮಿಗಳನ್ನು ಹೆದರಿಸಿ, 6000 ಕೋಟಿ ಹಣ ಸಂಗ್ರಹಿಸಿದೆ‌ . ಬಿಜೆಪಿ ಶೇ.84 ಸಂಗ್ರಹಿಸಿತು‌ . ಉಳಿದ ಪಕ್ಷಗಳಿಗೆ ಶೇ. 20 ಸಿಗುವಂತೆ ಮಾಡಿತು.ಬಾಂಡ್ ಮೂಲಕ ಸಂಗ್ರಹಿಸಿದ
ಕಾಂಗ್ರೆಸ್ ಪಕ್ಷದ ಹಣವನ್ನು ( ಆಕೌಂಟ್) ಮಾತ್ರ ಸೀಜ್ ಮಾಡಿತು. ಇದು ಹಿಟ್ಲರ್ ನಡೆಯಲ್ಲವೇ ಎಂದು ಚಂದ್ರು ಟೀಕಿಸಿದರು.

ದೇಶ ಲೂಟಿ ಹೊಡೆದವರು ದೇಶ ಬಿಟ್ಟು ಹೋದರು. ಶ್ರೀಮಂತ ಉದ್ಯಮಿ ಸ್ನೇಹಿತರಿಗೆ 10 ಲಕ್ಷ ಕೋಟಿ ವೇ ಆಫ್ ಮಾಡ್ತಿರಿ, ಆದರೆ ರೈತರಿಗೆ ಸಹಾಯ ಮಾಡಲಿಲ್ಲ ಎಂದರು.
ಒಂದು ದೇಶ ,ಒಂದು ಚುನಾವಣಾ ಹೆಸರಲ್ಲಿ ಸರ್ವಾಧಿಕಾರಿ ನಡೆಯತ್ತ ಬಿಜೆಪಿ ನಡೆಯುತ್ತಿದೆ ಎಂದರು‌ .ಹಾಗಾಗಿ ಜನ ಜಾಗ್ರತರಾಗಿ ಒಳ್ಳೆಯವರಿಗೆ ಮತ ನೀಡಿ, ಬಿಜೆಪಿಗೆ ಮತ ನೀಡಬೇಡಿ ಎಂದರು‌ .

ಕುಟುಂಬ ರಾಜಕಾರಣ ಎಂದು ಟೀಕಿಸುವ ಬಿಜೆಪಿ ,ಮೋದಿ ಅವರೇ ಯಡಿಯೂರಪ್ಪ ,ಮಕ್ಕಳು, ದೇವೇಗೌಡರು ಮಕ್ಕಳು, ಮೊಮ್ಮಕ್ಕಳು, ರವಿ ಸುಬ್ರಮಣ್ಯ ,ತೇಜಸ್ವಿ ಸೂರ್ಯ, ಶೆಟ್ಟರ್ ಕುಟುಂಬ, ಸಿದ್ದೇಶ , ಗಾಯತ್ರಿ ಸಿದ್ದೇಶ್ , ಹೀಗೆ ಹಲವಾರು ಪರಿವಾರ ರಾಜಕಾರಣ ಮತ್ತು ರಾಜಕೀಯ ಅಧಿಕಾರ ನಡೆದಿದೆ. ಇದು ಕುಟುಂಬ ರಾಜಕೀಯ ಅಲ್ಲವೇ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರು ಟೀಕಿಸಿದರು.

ಆಮ್ ಆದ್ಮಿ ಅತಿಕ್ರಮಣದಾರರ ಪರ ಇದೆ ಎಂದು ಚಂದ್ರು ಹೇಳಿದರು‌ .ಪ್ರಜಾಪ್ರಭುತ್ವ ವಿರೋಧಿ ಪಕ್ಷ , ಬಡವರ ಆಶೋತ್ತರಗಳ ವಿರುದ್ಧ ಇರುವ ಬಿಜೆಪಿ ಸೋಲಿಸಲು ನಾವು ಕಾಂಗ್ರೆಸ್ ಜೊತೆ ಇದ್ದೇವೆ. ಬಿಜೆಪಿ ಸ್ವಾಯತ್ತ ಸಂಸ್ಥೆಗಳನ್ನು ನಾಶ ಮಾಡಿದೆ. ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತದೆ. ಅದರ ವಿರುದ್ಧ ನಮ್ಮ ಹೋರಾಟ ಎಂದರು.

ಕಾರವಾರದ ಲಿಯೋ ಲೂಯಿಸ್ , ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಾಲಕೃಷ್ಣ ನಾಯ್ಕ, ರಾಜ್ಯ ಕಾರ್ಯದರ್ಶಿ ಅನಂತ ಕುಮಾರ್ ಬುಗಡಿ ಉಪಸ್ಥಿತರಿದ್ದರು.
…..

Latest Indian news

Popular Stories