ಕಾರವಾರ : ಸಂವಿಧಾನ ಬದಲಿಸುವ ಹೇಳಿಕೆ ನೀಡಿ, ವಿವಾದಕ್ಕೆ ಕಾರಣವಾಗಿದ್ದ ಕೆನರಾ ಕ್ಷೇತ್ರದ ಮಾಜಿ ಸಂಸದ ಅನಂತಕುಮಾರ ಹೆಗಡೆಯ ಶಿರಸಿ ಮನೆಯ ಮೇಲ್ಚಾವಣಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಜಿಮ್ ಸಾಮಗ್ರಿಗಳು ಸುಟ್ಟು ಹೋದ ಘಟನೆ ನಡೆದಿದೆ.
ಶಿರಸಿ ನಗರದ ಕೆ ಎಚ್ ಬಿ ಕಾಲೋನಿಯಲ್ಲಿರುವ ಮಾಜಿ ಸಂಸದ ಅನಂತಕುಮಾರ ಹೆಗಡೆಯ ಮನೆಯ ಮೇಲಭಾಗದ ಜಿಮ್ ನಲ್ಲಿ ಇಂದು ಬೆಳಿಗ್ಗೆ 4-30 ಗಂಟೆಗೆ ಬೆಂಕಿ ಕಾಣಿಸಿತ್ತು. ಪರಿಣಾಮವಾಗಿ ಜಿಮ್ ಉಪಕರಣಗಳು ಸುಟ್ಟು ಹೋಗಿವೆ. ಆಗ್ನಿ ಹೊತ್ತಿದ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಮತ್ತು ಕುಟುಂಬದವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಆಗಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಬೆಂಕಿನಂದಿಸಿದ್ದಾರೆ.
….