ಚುರುಕಿನ ಕಾರ್ಯಾಚರಣೆ | ನಾಪತ್ತೆಯಾಗಿದ್ದ ಧಾರೇಶ್ವರದ ಯುವಕನನ್ನು ಮಲ್ಪೆಯಲ್ಲಿ ಪತ್ತೆ ಹಚ್ಚಿ , ಕುಮಟಾ ಪೋಲೀಸ್ ಠಾಣೆಗೆ ಹಸ್ತಾಂತರಿಸಲಿರುವ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಮೀಪದ ಧಾರೇಶ್ವರದ ನಿವಾಸಿ ನಾಗೇಂದ್ರ ಅಂಬಿಗ (39) ಎಂಬ ಯುವಕ ಕಳೆದ ಜೂನ್ ತಿಂಗಳ 20 ನೇ ತಾರೀಖಿನಂದು ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಕುಮಟಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಈ ಯುವಕನನ್ನು ಪತ್ತೆ ಹಚ್ಚುವ ಸಲುವಾಗಿ ಸಾಮಾಜಿಕ ಜಾಲತಾಣದ ಮೂಲಕ ಸಂದೇಶವನ್ನು ಪಸರಿಸಿ ಸಾರ್ವಜನಿಕರಲ್ಲಿ ಪತ್ತೆ ಕಾರ್ಯಕ್ಕೆ ಸಹಕರಿಸಲು ಮನವಿಯನ್ನು ಮಾಡಿತ್ತು.

ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡವು ಚುರುಕಿನ ಕಾರ್ಯಾಚರಣೆಯ ಮೂಲಕ ನಾಗೇಂದ್ರ ಅಂಬಿಗನನ್ನು ಮಲ್ಪೆಯಲ್ಲಿ ಪತ್ತೆ ಹಚ್ಚಿದ್ದು , ಕುಮಟಾ ಪೋಲೀಸ್ ಠಾಣೆಗೆ ಆತನನ್ನು ಕರೆದೊಯ್ಯಲು ತಮ್ಮ ಆಂಬುಲೆನ್ಸ್ ಮೂಲಕ ಹೊರಟಿದೆ.

Latest Indian news

Popular Stories